ಹಿಂದೂ ಧರ್ಮ ತೊರೆದು ತಮ್ಮ ಮೂಲಧರ್ಮಕ್ಕೆ ಮರಳಲಿರುವ 10 ಲಕ್ಷ ದಲಿತರು | ಜಾತಿ, ಅಸಮಾನತೆ ತೊರೆದು ಬುದ್ಧನೆಡೆಗೆ ದಲಿತರ ಹೆಜ್ಜೆ - Mahanayaka
7:48 PM Saturday 14 - September 2024

ಹಿಂದೂ ಧರ್ಮ ತೊರೆದು ತಮ್ಮ ಮೂಲಧರ್ಮಕ್ಕೆ ಮರಳಲಿರುವ 10 ಲಕ್ಷ ದಲಿತರು | ಜಾತಿ, ಅಸಮಾನತೆ ತೊರೆದು ಬುದ್ಧನೆಡೆಗೆ ದಲಿತರ ಹೆಜ್ಜೆ

04/01/2021

ತುಮಕೂರು: ಸಂವಿಧಾನ ಶಿಲ್ಪಿ, ಡಾ.ಬಾಬಾ.ಸಾಹೇಬ್ ಅಂಬೇಡ್ಕರ್ ಅವರು ತಮ್ಮ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಐತಿಹಾಸಿಕ ದಿನವಾದ ಅಕ್ಟೋಬರ್ 14ರಂದು ಸುಮಾರು 10 ಲಕ್ಷ ಜನರು ಹಿಂದೂ ಧರ್ಮವನ್ನು ತೊರೆದು ಮರಳಿ ಬೌದ್ಧ ಧರ್ಮವನ್ನು ಸ್ವೀಕರಿಸಲಿದ್ದಾರೆ.

ಧಮ್ಮ ಲೋಕಾ ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಈ ಬಗ್ಗೆ ಮಾತನಾಡಿದ್ದು,ಈ ಮೂಲಕ, ಬಾಬಾ ಸಾಹೇಬರಿಗೆ ಗೌರವ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಕೆಂಚಮರಯ್ಯ , ಪಾವಗಡ ಶ್ರೀರಾಮ್, ಹನುಮಂತರಾಯಪ್ಪ, ಡಾ.ಸುರೇಂದ್ರ, ಡಾ.ಮುರಳಿಧರ್ ಮತ್ತು ಇತರರು ಉಪಸ್ಥಿತರಿದ್ದರು. ಉಪಾಸಕರು ಬುದ್ಧನ ವಿಗ್ರಹದೊಂದಿಗೆ ಮೆರವಣಿಗೆಯನಡೆಸಿದರು ಮತ್ತು ಜಿಲ್ಲೆಯ ನೂರಾರು ಜನರು ಈ ಸಂದರ್ಭದಲ್ಲಿ ಬೌದ್ಧಧರ್ಮವನ್ನು ಸ್ವೀಕರಿಸಿದರು.


Provided by

ಮನುವಾದದಿಂದ ಮುಕ್ತರಾಗಬೇಕಾದರೆ ದಲಿತರು ತಮ್ಮ ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ಮತ್ತೆ ಮರಳಬೇಕು ಎಂದು ಅಂಬೇಡ್ಕರ್ ಅವರು ಹೇಳಿದ್ದರು. ಹಿಂದೂ ಧರ್ಮದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಅವರು ಬಹಳಷ್ಟು ಶ್ರಮವಹಿಸಿದ್ದರು. ಆದರೆ, ಮನುವಾದಿಗಳು ಯಾವುದಕ್ಕೂ ಒಗ್ಗಿಕೊಳ್ಳದೇ, ಸಮಾನತೆಯನ್ನೂ ಬಯಸದ ಕಾರಣ. ಈ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ. ಹಾಗಾಗಿ ನಾವೇ ಬದಲಾಗಬೇಕು ಎನ್ನುವುದನ್ನು ಅರಿತ ಅಂಬೇಡ್ಕರರು, ತಾವು ದಲಿತರ ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ತಮ್ಮ ಲಕ್ಷಾಂತರ ಅನುಯಾಯಿಗಳ ಜೊತೆಗೆ ಮರಳಿದರು. ಇದು ಇಂದಿಗೂ ದಲಿತರಿಗೆ ಮಾದರಿಯಾಗಿದ್ದು, ಮನುವಾದದಿಂದ, ಜಾತಿ ವ್ಯವಸ್ಥೆಯಿಂದ ನೊಂದ ಲಕ್ಷಾಂತರ ದಲಿತರು ಪ್ರತಿ ವರ್ಷ ತಮ್ಮ ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ಮರಳುತ್ತಿದ್ದಾರೆ.

ಇತ್ತೀಚಿನ ಸುದ್ದಿ