ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿಗೆ ಸೋಲಿನ ಭೀತಿ
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಸೋಲಾಗುವ ಸೂಚನೆಗಳು ಲಭ್ಯವಾಗತೊಡಗಿವೆ. ಮುಂಬೈ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯು ಭಾರಿ ಮುಖಭಂಗಕ್ಕೆ ಒಳಗಾಗಿದ್ದು ಉದ್ದವ್ ಠಾಕ್ರೆ ಬಣದ ಯುವಸೇನೆಗೆ ಭಾರೀ ಗೆಲುವಾಗಿದೆ.
ಆದಿತ್ಯ ಠಾಕ್ರೆ ನೇತೃತ್ವ ನೀಡುವ ಶಿವಸೇನೆಯ ವಿದ್ಯಾರ್ಥಿ ವಿಭಾಗವಾದ ಯುವಸೇನಾ ಹತ್ತು ಸೀಟುಗಳಲ್ಲಿ ಹತ್ತನ್ನು ಗೆದ್ದುಕೊಂಡಿದೆ. ಈ ಗೆಲುವು ಶಿವಸೇನೆ ಸಹಿತ ಅಗಾಡಿ ಒಕ್ಕೂಟದ ಪಾಲಿಗೆ ಭಾರೀ ಧೈರ್ಯವನ್ನು ತುಂಬಿದಂತಾಗಿದೆ. ನಮ್ಮಿಂದ ತಪ್ಪುಗಳು ನಡೆದಿದೆ.
ಮುಂದಿನ ದಿನಗಳಲ್ಲಿ ಆತ್ಮಾವಲೋಕನ ನಡೆಸಿ ತಿದ್ದಿಕೊಳ್ಳುತ್ತೇವೆ ಎಂದು ಎಬಿವಿಪಿ ನಾಯಕರು ಹೇಳಿದ್ದಾರೆ. ಮಹಾರಾಷ್ಟ್ರದ ಶಿಂದೆ ಸರಕಾರ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಕಳಕೊಳ್ಳುತ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth