ಮಹಾರಾಷ್ಟ್ರದಲ್ಲಿ ಎಲೆಕ್ಷನ್ ಅಂತ್ಯ: ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು! - Mahanayaka

ಮಹಾರಾಷ್ಟ್ರದಲ್ಲಿ ಎಲೆಕ್ಷನ್ ಅಂತ್ಯ: ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು!

22/11/2024

ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಮತದಾನದ ಮುಗಿಯುತ್ತಲೇ ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾನಾ ಪತೋಲ್ ಮತ್ತು ಶಿವಸೇನೆ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ನಡುವೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.

ಇಬ್ಬರು ನಾಯಕರಿಗೆ ಕಾಂಗ್ರೆಸ್ – ಶಿವಸೇನೆ ಠಾಕ್ರೆ ಬಣ – ಎನ್ಸಿಪಿ ಶರದ್ ಪವಾರ್ ಬಣದ ಮಹಾ ವಿಕಾಸ್ ಅಘಾಡಿ, ಮತ್ತೆ ಅಧಿಕಾರಕ್ಕೆ ಬರುತ್ತೆ ಎನ್ನುವ ವಿಶ್ವಾಸದಲ್ಲಿರುವಂತಿದೆ. ಕಾಂಗ್ರೆಸ್ ನಾಯಕರೊಬ್ಬರು ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಪ್ರಸ್ತಾವನೆ ನಾನಾ ಪತೋಲ್ ಇಟ್ಟಾಗ, ಸಂಜಯ್ ರಾವತ್ ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು.

” ನಾನಾ ಪತೋಲ್ ಅವರ ಹೇಳಿಕೆಯನ್ನು ನಾನೊಬ್ಬನೇ ಅಲ್ಲ, ಯಾರೂ ಒಪ್ಪುವುದಿಲ್ಲ. ಮೂರು ಪಕ್ಷದವರು ಚರ್ಚಿಸಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ. ಇದು, ನಾನಾ ಪತೋಲ್ ಅವರು ಹೇಳಿದ್ದಾ ಅಥವಾ ಅವರು ಕಾಂಗ್ರೆಸ್ಸಿನ ಹೈಕಮಾಂಡಾ ” ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ನಾನಾ ಪತೋಲ್ ಅವರು ಮುಂದಿನ ಮುಖ್ಯಮಂತ್ರಿ ಎಂದು ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಘೋಷಿಸಬೇಕು. ತಮ್ಮನ್ನು ತಾವೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವುದಲ್ಲ ಎಂದು ಸಂಜಯ್ ರಾವತ್ ಹೇಳುವ ಮೂಲಕ, ನಾನಾ ಪತೋಲ್ ಗೆ ಟಾಂಗ್ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ