ಮಕ್ಕಳ ಕಳ್ಳರು ಪ್ರತ್ಯಕ್ಷ: ಆತಂಕ ಸೃಷ್ಟಿಸಿದ ಸಾಮಾಜಿಕ ಜಾಲತಾಣದ ಪೋಸ್ಟ್
ಬೆಳ್ತಂಗಡಿ: ಸರಕಾರಿ ಪ್ರೌಢಶಾಲೆ ಬಂಗಾಡಿ ಪರಿಸರದಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷರಾಗಿದ್ದಾರೆ, ಪೋಷಕರೇ ಜಾಗೃತೆ ವಹಿಸಿ ಎಂಬ ವಿಷಯವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಮಕ್ಕಳ ಅಪಹರಣ ಎಂಬ ವದಂತಿಗೆ ಕಾರಣವಾಗಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಸೋಮವಾರ ಬಂಗಾಡಿ ಪ್ರೌಢ ಶಾಲಾ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿ ಅಲ್ಲಿಯ ಶಾಲಾ ವಿದ್ಯಾರ್ಥಿಯನ್ನು ಕರೆದಿರುವುದಾಗಿ ಬೆದರಿಸಿರುವುದಾಗಿ ಹೇಳಲಾಗುತ್ತಿದೆ. ಇದನ್ನು ಮಕ್ಕಳು ಪೋಷಕರ ಗಮನಕ್ಕೆ ತಂದಿದ್ದು, ಬಳಿಕ ಯಾರೋ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಪ್ರತ್ಯಕ್ಷರಾಗಿದ್ದಾರೆ ಎಂದು ಪೊಸ್ಟ್ ಹಾಕಿದ್ದು, ಬಹಳಷ್ಟು ವೈರಲ್ ಆಗುತ್ತಿದೆ.
ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುತ್ತಿರುವಾಗ ಅಪರಿಚಿತ ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿ ಮಕ್ಕಳನ್ನು ಬೆದರಿಸಿದ್ದಾರೆ. ಹೆದರಿ ವಿದ್ಯಾರ್ಥಿಗಳು ಓಡಿಹೋಗಿರುವುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಪೋಷಕರ ಗಮನಕ್ಕೆ ತಂದಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲಾ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ಈ ನಡುವೆ ಈ ಪರಿಸರದ ಯುವಕರ ತಂಡವೊಂದು ತಮಾಷೆಗಾಗಿ ಮಕ್ಕಳನ್ನು ಹೆದರಿಸಿದ್ದರು ಎಂಬ ವಿಚಾರದ ಬಗ್ಗೆಯೂ ಬಂಗಾಡಿ ಪರಿಸರದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರು ದೂರು ಸ್ವೀಕರಿಸಿದ್ದು ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka