ಮದುವೆಯಲ್ಲಿ ಪಟಾಕಿ ಸಿಡಿಸೋ ವಿಚಾರದಲ್ಲಿ ಗಲಾಟೆ: 7 ಮಂದಿಗೆ ಗಂಭೀರ ಗಾಯ
ಮದುವೆ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಜಗಳ ತಾರಕಕ್ಕೇರಿದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ.
ವರನ ಕಡೆಯ ವ್ಯಕ್ತಿ ಸಿಟ್ಟಿನಲ್ಲಿ ಕಾರನ್ನು ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಗಳ ಮೇಲೆ ಹರಿಸಿದ್ದಾನೆ. ಇದರಿಂದ 7 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ವರನ ಕಡೆಯ ವ್ಯಕ್ತಿಯೊಬ್ಬ ತನ್ನ ಕಾರು ಪಾರ್ಕ್ ಮಾಡುವ ಜಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ವಧುವಿನ ಕಡೆಯವರ ಬಳಿ ವಾಗ್ವಾದಕ್ಕೆ ಇಳಿದಿದ್ದಾನೆ. ಮೊದಲಿಗೆ ಮಾತಿನಿಂದ ಆರಂಭವಾದ ಜಗಳ ಆ ಬಳಿಕ ದೈಹಿಕವಾಗಿ ಹಲ್ಲೆಯವರೆಗೂ ಹೋಗಿದೆ. ಪರಿಣಾಮ ವರನ ಕಡೆಯ ವ್ಯಕ್ತಿ ಸಿಟ್ಟಿನಲ್ಲಿ ಕಾರಿಗೆ ಹತ್ತಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಗಳ ಮೇಲೆ ಹರಿಸಿದ್ದಾನೆ. ತನ್ನ ಮುಂದೆ ನಿಂತಿದ್ದ ವ್ಯಕ್ತಿಗಳ ಮೇಲೆ ಕಾರು ಹರಿಸಿದ್ದ ಕಾರಣ 7 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಗಾಯಗೊಂಡು ನರಳಾಡುತ್ತಿರುವ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj