ಪತ್ನಿಯ ಬರ್ಬರವಾಗಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ: ಪತಿಯ ಸಂಶಯಕ್ಕೆ ಬಲಿಯಾದ ಪತ್ನಿ!
ಮಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಪಿಲಾರ್ ನ ಪಂಜಂದಾಯ ದೇವಸ್ಥಾನದ ಸಮೀಪ ನಡೆದಿದೆ.
55 ವರ್ಷದ ಶಿವಾನಂದ ತನ್ನ ಹೆಂಡತಿ ಶೋಭರನ್ನು ಹತ್ಯೆ ಮಾಡಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಶಯದ ಸ್ವಭಾವದ ಶಿವಾನಂದ ತನ್ನ ಹೆಂಡತಿ ಶೋಭರ ಜತೆ ಯಾವಾಗಲೂ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಡುತ್ತಿದ್ದರು.
ನಿನಗೆ ಅನೈತಿಕ ಸಂಬಂದ ಇದೆ ಎಂದು ಸಂಶಯ ಮಾಡಿ ಕಂಡಕಂಡವರಿಗೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇಂದು ಕೂಡ ತಾಯಿ ಜೊತೆಗೆ ಜಗಳವಾಡಿದ್ದರು ಎಂದು ಶೋಭಾ ಅವರ ಮಗ ಕಾರ್ತಿಕ್ ತಿಳಿಸಿದ್ದು, ಮಗ ಕೆಲಸಕ್ಕೆ ತೆರಳಿದ್ದಾಗ ಪತ್ನಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಪ್ರತ್ಯೇಕವಾಗಿ ದೂರು ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು. ಮೃತ ದಂಪತಿಗೆ ಕಾರ್ತಿಕ್ ಎಂಬ ಮಗ ಮತ್ತು ಓರ್ವ ಪುತ್ರಿ ಇದ್ದಾರೆ. ಮಗ ತಂದೆ-ತಾಯಿ ಜೊತೆಗೆ ವಾಸವಿದ್ದು, ಮಗಳನ್ನು ಪೆರ್ಮುದೆಯ ಸಂದೀಪ್ ರವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka