ಪ್ರತಿಭಾ ಕುಳಾಯಿ ಬಗ್ಗೆ ಮಾನಹಾನಿಕರ ಪೋಸ್ಟ್: ಶ್ಯಾಮ್ ಸುದರ್ಶನ್ ಭಟ್ ಬಂಧನಕ್ಕೆ ಬಿಲ್ಲವ ಮುಖಂಡರ ಒತ್ತಾಯ
ಮಂಗಳೂರು: ಕಾಂಗ್ರೆಸ್ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿಯವರ ಬಗ್ಗೆ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ತೋರುತ್ತಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಬಿಲ್ಲವ ಸಮಾಜದ ನಿಯೋಗ ಇಂದು ಮಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.
ಶ್ಯಾಮ್ ಸುದರ್ಶನ್ ಭಟ್ ಎಂಬಾತ ಫೇಸ್ ಬುಕ್ ನಲ್ಲಿ ಪ್ರತಿಭಟನೆ ನಿರತ ಫೋಟೋ ಹಾಕಿ ಮಾನಹಾನಿ ಮಾಡುವ ಉದ್ದೇಶದ ಅನಾಗರಿಕ ಲೈಂಗಿಕ ಸಂಜ್ಞೆ ಉಳ್ಳ ಮೆಸೇಜ್ ನ್ನು ಹಾಕಿದ್ದು, ಇದು ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವಂತದ್ದಾಗಿದೆ. ಅಭಿಪ್ರಾಯ ಬೇಧಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುವ ಅವಕಾಶ ಇರುವಾಗ ಈ ರೀತಿಯ ವರ್ತನೆ ಸರಿಯಲ್ಲ. ರಾಜಕೀಯವಾಗಿ ಪ್ರಬಲ ಬೆಂಬಲ ಇರುವ ಆರೋಪಿಯನ್ನು ಪೊಲೀಸರು ಘಟನೆ ನಡೆದು ಒಂದು ವಾರ ಕಳೆದರೂ ಬಂಧಿಸಿಲ್ಲ. ಇನ್ನು ಹೀಗೆಯೇ ವಿಳಂಬ ನೀತಿ ಅನುಸರಿಸಿದರೆ ಸಮಾಜದ ಪ್ರತಿಯೊಬ್ಬರನ್ನು ಸೇರಿಸಿಕೊಂಡು ನ್ಯಾಯಕ್ಕಾಗಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ತಲೆ ಮರೆಸಿ ಕೊಂಡಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜದ ಸ್ವಾಸ್ಥ ಕೆಡಿಸುವ ಆರೋಪಿಯ ಮೇಲೆ ಕಾನೂನು ಕ್ರಮಗಳನ್ನು ಕೈ ಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka