ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ - Mahanayaka
9:23 AM Wednesday 20 - August 2025

ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ

masjid cc camra
30/03/2021


Provided by

ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ನಡೆಸಿರುವ ಘಟನೆ   ದಕ್ಷಿಣ ಕನ್ನಡ ಜಿಲ್ಲೆಯ  ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು,   ಫರಂಗಿಪೇಟೆ-ಅಮ್ಮೆಮಾರ್ ರಸ್ತೆಯಲ್ಲಿರುವ ಬಿರುರ್ಲ್ ವಾಲಿದೈನ್ ಮಸೀದಿಯ ಧರ್ಮಗುರುಗೆ ರಾತ್ರಿ 12 ಗಂಟೆಯ ವೇಳೆಗೆ ಮಸೀದಿಗೆ ನುಗ್ಗಿದ ತಂಡವೊಂದು ಹಲ್ಲೆ ನಡೆಸಿದೆ.

ಮಸೀದಿಯ ಧರ್ಮಗುರು ಕುಂದಾಪುರದ ನಿವಾಸಿಯಾಗಿರುವ ಮುಸ್ತಾಕ್ ಹಲ್ಲೆಗೊಳಗಾದವರಾಗಿದ್ದಾರೆ.  ಸುಮಾರು 3 ಜನರ ತಂಡ ಮಸೀದಿಗೆ ನುಗ್ಗಿದ್ದು,  2ನೇ ಮಹಡಿಯಲ್ಲಿದ್ದ ಮುಸ್ತಾಕ್  ಅವರ ಕತ್ತು ಹಿಡಿದು ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರು ದುಷ್ಕರ್ಮಿಗಳನ್ನು ದೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಸೀದಿ ಅಧ್ಯಕ್ಷ ಸೈಯ್ಯದ್ ಬಾವಾ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಮಸೀದಿಯ ಸಿಸಿ ಕ್ಯಾಮರದಲ್ಲಿ ಆರೋಪಿಗಳು ಮಸೀದಿಯೊಳಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

ಇತ್ತೀಚಿನ ಸುದ್ದಿ