ಪಾರ್ಕ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ
30/03/2021
ದೆಹಲಿ: ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್.ಬಾವಾ ಎಂಬವರು ಪಾರ್ಕ್ ಕೊಳವೊಂದರ ಬಳಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಸೋಮವಾರ ಸಂಜೆ ಈ ಘಟನೆ ನಡೆದಿದೆ.
58 ವರ್ಷದ ಬಾವಾ ಪಶ್ಚಿಮ ದೆಹಲಿಯ ಫತೇ ನಗರ ನಿವಾಸಿಯಾಗಿದ್ದರು. ಸೋಮವಾರ ಸಂಜೆ ಬಾವಾ ಅವರ ಮೃತದೇಹ ಸುಭಾಷ್ ನಗರ ಪಾರ್ಕ್ ನ ಕೊಳದ ಸಮೀಪದ ಗ್ರಿಲ್ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿದ ಪೊಲೀಸರ್ ಪಾರ್ಕ್ ಗೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ.
ವೈಯಕ್ತಿಕ ಕಾರಣಗಳಿಂದ ಬಾವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯಾವುದೇ ಪಕ್ಷದ ನಾಯಕರು ಮುಂದಾಗಿಲ್ಲ ಎಂದು ವರದಿಯಾಗಿದೆ.