ಸಾಮೂಹಿಕ ಹತ್ಯಾಕಾಂಡ: ಹಂತಕ ಅರೆಸ್ಟ್; ಭಯಾನಕ ವಿಚಾರ ಬಯಲು - Mahanayaka

ಸಾಮೂಹಿಕ ಹತ್ಯಾಕಾಂಡ: ಹಂತಕ ಅರೆಸ್ಟ್; ಭಯಾನಕ ವಿಚಾರ ಬಯಲು

27/02/2025

ಒಬ್ಬೊಬ್ಬರನ್ನಾಗಿ ಸುತ್ತಿಗೆಯಿಂದ ಬಡಿದು ಕೊಂದ ಕೇರಳದ ಐವರ ಸಾಮೂಹಿಕ ಹತ್ಯಾಕಾಂಡದ ಹಂತಕ ಅಫಾನ್​​ ಎಂಬಾತನನ್ನು ಬಂಧಿಸಲಾಗಿದೆ. ಐವರನ್ನು ಕೊಲೆ ಮಾಡಿ ವಿಷ ಸೇವಿಸಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು, ಪ್ರಕರಣದ ತನಿಖೆಗೆ ಪೊಲೀಸರು ಗುರುವಾರ ತಮ್ಮ ವಶಕ್ಕೆ ಪಡೆದಿದ್ದಾರೆ.


Provided by

ಹತ್ಯಾಕಾಂಡದ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬುದನ್ನು ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಯ ಹೇಳಿಕೆಯನ್ನು ದಾಖಲಿಸಲು ಸಜ್ಜಾಗಿದ್ದಾರೆ. ಜೊತೆಗೆ, ದಾಳಿಯಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯ ತಾಯಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಹೇಳಿಕೆಯೂ ಪ್ರಕರಣದಲ್ಲಿ ಪ್ರಮುಖವಾಗಿದೆ.

ಮಾರಣಾಂತಿಕ ದಾಳಿಯಲ್ಲಿ ಬದುಕುಳಿದಿರುವ ಹಂತಕನ ತಾಯಿ ಚೇತರಿಕೆ ಕಂಡಿದ್ದು, ಅವರ ಹೇಳಿಕೆಯನ್ನೂ ದಾಖಲಿಸಲಾಗುವುದು. ಅವರ ಆರೋಗ್ಯ ಸ್ಥಿರವಾಗಿದೆ. ಮಾತನಾಡಲು ಸಮರ್ಥರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹತ್ಯಾಕಾಂಡ ಸುತ್ತಲಿನ ಅಸ್ಪಷ್ಟತೆಗಳ ಬಗ್ಗೆ ಅವರ ಹೇಳಿಕೆಯು ಅತಿ ಮಹತ್ವದ್ದಾಗಿದೆ ಎಂದು ಪೊಲೀಸರು ಹೇಳಿದರು.


Provided by

ಹಂತಕ ಅಫಾನ್ ಐವರನ್ನುಕೊಂದಿದ್ದಾಗಿ ತನಿಖೆಯಲ್ಲಿ ತಿಳಿದಿದೆ. ತನ್ನ 13 ವರ್ಷದ ತಮ್ಮನ ತಲೆಗೆ ಹಲವು ಬಾರಿ ಹೊಡೆದು ಕೊಂದಿದ್ದಾನೆ. ವಿಚಿತ್ರವೆಂದರೆ, ಬಳಿಕ ಮೃತದೇಹದ ಸುತ್ತಲೂ 500 ರೂಪಾಯಿ ನೋಟುಗಳನ್ನು ಹರಡಿದ್ದಾನೆ. ಜೊತೆಗೆ, ಚಿಕ್ಕಪ್ಪನ ತಲೆಗೆ 20 ಕ್ಕೂ ಹೆಚ್ಚು ಬಾರಿ ಹೊಡೆದಿದ್ದು, ತಲೆಬುರುಡೆ ಛಿದ್ರವಾಗಿದೆ. ಆತನ ಪತ್ನಿ ಚಹಾ ಮಾಡುತ್ತಿದ್ದಾಗ ಅಡುಗೆಮನೆಯಲ್ಲಿ ದಾಳಿ ನಡೆಸಿದ್ದಾನೆ. ತಾಯಿ ಮೇಲೂ ದಾಳಿ ಸುತ್ತಿಗೆಯಿಂದ ದಾಳಿ ಮಾಡಿದ್ದು, ಅದೃಷ್ಟವಶಾತ್​ ಆಕೆ ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ