ಮತ್ತೊಂದು ನಿರ್ಭಯ ಪ್ರಕರಣ: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆಯ ಅತ್ಯಾಚಾರ, ಖಾಸಗಿ ಭಾಗಕ್ಕೆ ರಾಡ್ ಹಾಕಿ ಭೀಕರ ಕೊಲೆ - Mahanayaka

ಮತ್ತೊಂದು ನಿರ್ಭಯ ಪ್ರಕರಣ: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆಯ ಅತ್ಯಾಚಾರ, ಖಾಸಗಿ ಭಾಗಕ್ಕೆ ರಾಡ್ ಹಾಕಿ ಭೀಕರ ಕೊಲೆ

06/01/2021

ಬದೌನ್: ದೇವಾಲಯಕ್ಕೆ ಹೋಗಿದ್ದ 50 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಭೀಖರವಾಗಿ ಹತ್ಯೆ ನಡೆಸಿರುವ ಘಟನೆ ನಡೆದಿದ್ದು, ಮತ್ತೊಂದು ನಿರ್ಭಯ ಪ್ರಕರಣ ಇದಾಗಿದೆ.

ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿ ಕೆಲವೇ ಸಮಯದಲ್ಲಿ ಮತ್ತೊಂದು ಘಟನೆ ಇದೀಗ ಸಂಭವಿಸಿದೆ. ಮಹಿಳೆಯ ಮೃತದೇಹವೊಂದು ಪತ್ತೆಯಾದ ಬಳಿಕ ಅದನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಗುಪ್ತಾಂಗಕ್ಕೆ ರಾಡ್ ತೂರಿಸಿರುವುದು ಬೆಳಕಿಗೆ ಬಂದಿದೆ.

ಸಂತ್ರಸ್ತೆಯ ಮೃತದೇಹವನ್ನು ಮೂವರು ವೈದ್ಯರ ಸಮಿತಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ, ಮಹಿಳೆಯ ಶ್ವಾಸಕೋಶಕ್ಕೆ ಹಾನಿಯಾಗಿದೆ, ಕಾಲು, ಪಕ್ಕೆಲುಬು ಮುರಿಯಲಾಗಿದೆ. ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡ್ ನಿಂದ ಭೀಕರವಾಗಿ ದಾಳಿ ನಡೆಸಿರುವುದು ಪತ್ತೆಯಾಗಿದೆ.

ಘಟನೆ ಸಂಬಂಧ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಂತ್ ಬಾಬಾ ಸತ್ಯನಾರಾಯಣನಿಗಾಗಿ ಶೋಧ ನಡೆಸಲಾಗುತ್ತಿದೆ.  ಮಹಂತ್ ಬಾಬಾನ ಸಹಚರ ವೇದಾರಾಮ್ ಮತ್ತು ಚಾಲಕ ಜಸ್ಪಾಲ್ ನ್ನು ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿ