ವಿರೋಧ ಪಕ್ಷಗಳ ಪಿತೂರಿಗಳ ವಿರುದ್ಧವಾಗಿ BSP – RLSP ಮೈತ್ರಿಕೂಟ ಬೆಂಬಲಿಸಿ | ಮಾಯಾವತಿ ಮನವಿ - Mahanayaka

ವಿರೋಧ ಪಕ್ಷಗಳ ಪಿತೂರಿಗಳ ವಿರುದ್ಧವಾಗಿ BSP – RLSP ಮೈತ್ರಿಕೂಟ ಬೆಂಬಲಿಸಿ | ಮಾಯಾವತಿ ಮನವಿ

26/10/2020

ಲಕ್ನೋ: ವಿರೋಧ ಪಕ್ಷಗಳ ತಂತ್ರ, ಪಿತೂರಿಗಳ ವಿರುದ್ಧ ಜನರು ಮತ ಚಲಾಯಿಸುವ ಮೂಲಕ ಬಹುಜನ ಸಮಾಜ ಪಾರ್ಟಿ ಹಾಗೂ ರಾಷ್ಟ್ರೀಯ ಲೋಕ ಸಮಾಜ ಪಕ್ಷದ ಮೈತ್ರಿಯನ್ನು ಬೆಂಬಲಿಸುವಂತೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮನವಿ ಮಾಡಿದ್ದಾರೆ.

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಎಸ್ ಪಿ-ಆರ್ ಎಲ್ ಎಸ್ ಎಫ್ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮಾಯಾವತಿ ಟ್ವಿಟ್ ಮಾಡಿದ್ದಾರೆ.

ಬಿಹಾರದಲ್ಲಿ 80 ಸ್ಥಾನಗಳಲ್ಲಿ ಬಿಎಸ್ ಪಿ ಸ್ಪರ್ಧಿಸುತ್ತಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮೇಲ್ಜಾತಿಗಳು ಮತ್ತು ಸಮಾಜದ ಅಂಚಿನಲ್ಲಿರುವ ಎಲ್ಲಾ ವರ್ಗಗಳಿಗೂ ಸಮಾನ ಹಕ್ಕು ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ನೀಡುವುದು ಈ ಮೈತ್ರಿಯ ಉದ್ದೇಶವಾಗಿದೆ ಎಂದು ಮಾಯಾವತಿ ಇತ್ತೀಚೆಗೆ ಭಾಷಣವೊಂದರಲ್ಲಿಯೂ ಹೇಳಿದ್ದರು.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ನಿಮ್ಮ ಸುದ್ದಿಗಳನ್ನು ಕಳುಹಿಸಿ: mahanayakain@gmail.com

ಇತ್ತೀಚಿನ ಸುದ್ದಿ