ಇತಿಹಾಸ: ಮಹಿಳೆಗೆ ಸಿರಿಯಾದ ಸೆಂಟ್ರಲ್ ಬ್ಯಾಂಕ್ ನ ಗವರ್ನರ್ ಪಟ್ಟ: ಪ್ರಮುಖ ನಿರ್ಧಾರ ಪ್ರಕಟ
ಸಿರಿಯಾದ ಸೆಂಟ್ರಲ್ ಬ್ಯಾಂಕ್ ನ ಗವರ್ನರ್ ಆಗಿ ಮೈಸಾ ಸಬ್ರಿನಾ ಎಂಬ ಮಹಿಳೆಯನ್ನು ಹೊಸ ಸರ್ಕಾರ ನೇಮಿಸಿದೆ. ಅಸದ್ ಅವರ ಸರ್ಕಾರವನ್ನು ಪದಚ್ಯುತಗೊಳಿಸಿ, ಜುಲಾನಿ ಅಧಿಕಾರಕ್ಕೆ ಏರಿದ ಬಳಿಕ ಮಾಡಲಾದ ಪ್ರಮುಖ ನಿರ್ಧಾರ ಇದಾಗಿದೆ. ಸಿರಿಯಾದಲ್ಲಿ ಶರಿಯ ಕಾನೂನು ಜಾರಿಯಾಗುತ್ತದೆ ಮತ್ತು ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ನಿಷೇಧಿಸಲಾಗುತ್ತದೆ ಎಂಬೆಲ್ಲ ಪುಕಾರುಗಳ ಮಧ್ಯೆ ಈ ನೇಮಕ ನಡೆದಿದೆ.
ಸಿರಿಯಾ ಸೆಂಟ್ರಲ್ ಬ್ಯಾಂಕಿನ 70 ವರ್ಷಗಳ ಚರಿತ್ರೆಯಲ್ಲಿ ಇದೇ ಮೊದಲ ಬಾರಿ ಮಹಿಳೆಯರು ಅದರ ಗವರ್ನರ್ ಸ್ಥಾನಕ್ಕೆ ಏರಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ 15 ವರ್ಷಗಳಿಗಿಂತಲೂ ಅಧಿಕ ಅನುಭವವನ್ನು ಈ ಮೈಸ ಹೊಂದಿದ್ದಾರೆ. ಹಲವು ವರ್ಷಗಳಿಂದ ಸೆಂಟ್ರಲ್ ಬ್ಯಾಂಕ್ ನಲ್ಲಿ ದುಡಿಯುತ್ತಿದ್ದಾರೆ.
ಜುಲಾನಿ ಸರಕಾರ ಮುಖ್ಯ ಸ್ಥಾನಗಳಿಗೆ ನೇಮಿಸುತ್ತಿರುವ ಎರಡನೇ ಮಹಿಳೆ ಇವರಾಗಿದ್ದಾರೆ.. ಈ ಮೊದಲು ಮಹಿಳಾ ಆರೋಗ್ಯ ಇಲಾಖೆ ಅಧ್ಯಕ್ಷರಾಗಿ ಆಯಿಷಾ ಅವರನ್ನು ನೇಮಿಸಿತ್ತು.
ಮೈಸ ಸಬ್ ರೀನ ಅವರು ದಮಾಸ್ಕಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದವರು. ಇದೇ ವೇಳೆ ಅಸದ್ ಸರಕಾರದ ವಿರುದ್ಧ ಹೇರಲಾಗಿರುವ ನಿಷೇಧದ ಭಾಗವಾಗಿ ಸಿರಿಯಾದ ಸೆಂಟ್ರಲ್ ಬ್ಯಾಂಕ್ ನ ವಿರುದ್ಧ ಅಮೆರಿಕ ಸಹಿತ ವಿವಿಧ ರಾಷ್ಟ್ರಗಳು ಹೇರಿರುವ ನಿಷೇಧ ಇನ್ನೂ ರದ್ದಾಗಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj




























