ದಲಿತ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅಡ್ಡಿ | ಪೊಲೀಸ್ ಕಮಿಷನರ್ ಮೊರೆ ಹೋದ ದಲಿತ ಮಹಿಳೆಯರು  - Mahanayaka

ದಲಿತ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅಡ್ಡಿ | ಪೊಲೀಸ್ ಕಮಿಷನರ್ ಮೊರೆ ಹೋದ ದಲಿತ ಮಹಿಳೆಯರು 

17/01/2021

ಮುಲ್ಕಿ: ಕಿನ್ನಿಗೋಳಿ ಗ್ರಾಮಪಂಚಾಯತ್ ನ ಮೀನು ಮಾರುಕಟ್ಟೆಯಲ್ಲಿ 70 ವರ್ಷಗಳಿಂದಲೂ ದಲಿತ ಮಹಿಳೆಯರು ಒಣ ಮೀನು  ಹಾಗೂ ಚಿಪ್ಪು ಮಾರಾಟ ಮಾಡುತ್ತಿದ್ದು, ಆದರೆ ಇತ್ತೀಚೆಗೆ ಕೆಲವು ಮಹಿಳೆಯರು ಹಸಿ ಮೀನು ಮಾರಾಟ ಮಾಡುವವರು ದಲಿತ ಮಹಿಳೆಯರಿಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನಾವು ಹಿಂದಿನಿಂದಲೂ ಇಲ್ಲಿ ಒಣ ಮೀನು ಮಾರುತ್ತಿದ್ದೇವೆ. ಇತ್ತೀಚೆಗೆ ಇತರ ಸಮುದಾಯದ ಕೆಲವು ಮಹಿಳೆಯರು ನಮಗೆ ಕಿರುಕುಳ ನೀಡುತ್ತಿದ್ದು, ನಮ್ಮ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ನೊಂದ ದಲಿತ ಮಹಿಳೆಯರು ಆರೋಪಿಸಿದ್ದಾರೆ.

ಈ ಕುರಿತಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 2 ಬಾರಿ ದೂರನ್ನು ದಾಖಲಿಸಿದ್ದೇವೆ. ಪೊಲೀಸರು ಮುಚ್ಚಳಿಕೆ ಬರೆದು ಪ್ರಕರಣವನ್ನು ಇತ್ಯರ್ಥ ಮಾಡಿದ್ದರೂ, ಆ ಮಹಿಳೆಯರು ತಮ್ಮ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ನಮ್ಮ ಜಾತಿ ನಿಂದನೆ ಕೂಡ ನಡೆಸಲಾಗುತ್ತಿದೆ. ನಮ್ಮ ಬಳಿ ಬರುವ ಗ್ರಾಹಕರ ಜೊತೆ ಅನುಚಿತವಾಗಿ ಇತ್ತೀಚೆಗೆ ಬಂದಿರುವ ಈ ಮಹಿಳೆಯರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಹೀಗಾಗಿ ನ್ಯಾಯಕ್ಕಾಗಿ ನಾವು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದೇವೆ ಎಂದು ಮಹಿಳೆಯರು ತಿಳಿಸಿದ್ದಾರೆ.

ಇನ್ನೂ ನೊಂದ ಮಹಿಳೆಯರ ಬಳಿಯಲ್ಲಿ ಮೀನು ಖರೀದಿಸಲು ಬಂದ ಯುವಕನೋರ್ವನಿಗೆ ಈ ಕಿಡಿಗೇಡಿ ಮಹಿಳೆಯರು ಲಂಗ ಎತ್ತಿ ತೋರಿಸಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವನ್ನು ಸ್ವತಃ ಸಂತ್ರಸ್ತ ಯುವಕನೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ