ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಟ್ರಂಪ್ ಗೆ ಡಿವೋರ್ಸ್ ನೀಡಲು ಮೆಲಾನಿಯಾ ಟ್ರಂಪ್ ಸಿದ್ಧತೆ! - Mahanayaka

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಟ್ರಂಪ್ ಗೆ ಡಿವೋರ್ಸ್ ನೀಡಲು ಮೆಲಾನಿಯಾ ಟ್ರಂಪ್ ಸಿದ್ಧತೆ!

09/11/2020

ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಗೆ ಪತ್ನಿ  ಮೆಲಾನಿಯಾ ಟ್ರಂಪ್ ಶಾಕ್ ನೀಡಿದ್ದು,  ಡಿವೋರ್ಸ್ ನೀಡಲು ಸಜ್ಜಾಗಿದ್ದಾರೆ. ಟ್ರಂಪ್ ಅವರ ಆಡಳಿತ ಅವಧಿಕ ಕೊನೆಯಾಗುತ್ತಿದ್ದಂತೆಯೇ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿವೆ.


Provided by

ಶ್ವೇತ ಭವನದ ಮಾಹಿತಿಗಳು ಈ ವಿಚಾರವನ್ನು ಹೇಳಿವೆ ಎಂದು ಅಮೆರಿಕ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ. ಮೆಲಾನಿಯಾ ಟ್ರಂಪ್ ಅವರು ಶ್ವೇತ ಭವನದಲ್ಲಿ ಇದ್ದಷ್ಟು ಕಾಲ ಟ್ರಂಪ್ ನಿಂದ ಪ್ರತ್ಯೇಕವಾಗಿಯೇ ಇದ್ದು, ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದರು.

ಟ್ರಂಪ್ ಗೆ ಡಿವೋರ್ಸ್ ನೀಡಲು ಈ ಹಿಂದೆಯೇ ಮೆಲಾನಿಯಾ ಟ್ರಂಪ್ ಯೋಜನೆ ಹಾಕಿದ್ದರು. ಆದರೆ ಟ್ರಂಪ್ ಅಧಿಕಾರದಲ್ಲಿದ್ದುದರಿಂದ ತನ್ನನ್ನು ಶಿಕ್ಷಿಸಬಹುದು ಎಂಬ ಭಯದಿಂದ ಡಿವೋರ್ಸ್ ನೀಡಿರಲಿಲ್ಲ.  ಟ್ರಂಪ್ ಅಧಿಕಾರವಧಿ ಕೊನೆಗೊಳ್ಳುತ್ತಿದ್ದಂತೆಯೇ ಅವರಿಗೆ ವಿಚ್ಛೇದನ ನೀಡಲು ಮೆಲಾನಿಯಾ  ನಿರ್ಧರಿಸಿದ್ದಾರಂತೆ.

ಇತ್ತೀಚಿನ ಸುದ್ದಿ