ನೂರಾರು ಹೂಡಿಕೆದಾರರಿಗೆ  ವಂಚನೆ ಪ್ರಕರಣ ಶಾಸಕನ ಬಂಧನ - Mahanayaka
9:15 AM Saturday 24 - January 2026

ನೂರಾರು ಹೂಡಿಕೆದಾರರಿಗೆ  ವಂಚನೆ ಪ್ರಕರಣ ಶಾಸಕನ ಬಂಧನ

07/11/2020

ಕಾಸರಗೋಡು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಂಜೇಶ್ವರ ಕ್ಷೇತ್ರದ ಐಯುಎಂಎಲ್ ಶಾಸಕ ಎಂ ಸಿ ಕಮರುದ್ದೀನ್ ನನ್ನು ಇಂದು ರಾಜ್ಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶಾಸಕ ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಅವರು ಗುಂಪಿನ ನೂರಾರು ಹೂಡಿಕೆದಾರರಿಗೆ 100 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೂಪ್ ನ ಪಾಲುದಾರರಾದ ವ್ಯವಸ್ಥಾಪಕ ನಿರ್ದೇಶಕ ಪೂಕೋಯಾ ತಂಗಲ್ ಅವರನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ಕು ಪ್ರಕರಣಗಳ ವಿಚಾರಣೆಯ ಬಳಿಕ ಶಾಸಕರನ್ನು ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿ