ಪಾನಿಪುರಿಗೆ ಶೌಚಾಲಯದ ನೀರು ಬಳಸಿದ ವ್ಯಾಪಾರಿ | ವಿಡಿಯೋ ವೈರಲ್
07/11/2020
ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬ ಮಾಡಿದ ಕೆಲಸ ಇದೀಗ ವ್ಯಾಪಕವಾಗಿ ವೈರಲ್ ಆಗಿದ್ದು, ಪಾನಿಪುರಿ ಪ್ರಿಯರಿಗೆ ಪಾನಿಪುರಿ ತಿನ್ನುವ ಸಂದರ್ಭದಲ್ಲಿ ಇದು ನೆನಪಾಗಿ, ಹಿಂಸಿಸುವಂತಾಗಿದೆ.
ತಳ್ಳುಗಾಡಿಯಲ್ಲಿ ಪಾನಿಪುರಿ ಮಾರಾಟ ಮಾಡುವ ವ್ಯಾಪಾರಿಯು ಶೌಚಾಲಯಕ್ಕೆ ಬಳಸುವ ನೀರನ್ನು ಪಾನಿಪುರಿ ತಯಾರಿಕೆಗೆ ಬಳಸಿದ್ದು, ಈ ವಿಡಿಯೋವನ್ನು ಗ್ರಾಹಕನೊಬ್ಬ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ.
ಈ ವಿಡಿಯೋ ನೋಡಿ ರೊಚ್ಚಿಗೆದ್ದ ಜನರು ಆತನ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಇಂತಹ ಘಟನೆಗಳು ಹಲವಾರು ಕಡೆಗಳಲ್ಲಿ ಈ ಹಿಂದೆಯೂ ನಡೆದಿದೆ. ಘಟನೆ ನಡೆದಾಗ ಜನರು ಸ್ವಲ್ಪ ದಿನ ಜಾಗೃತರಾಗಿರುತ್ತಾರೆ. ಆ ಬಳಿಕ ಅದು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ.