ಪಶ್ಚಿಮ ಬಂಗಾಳದಲ್ಲಿ ಗೆದ್ದರೆ ಪಶ್ಚಿಮ ಬಂಗಾಳವನ್ನು ಏನು ಮಾಡುತ್ತೇನೆ ಅಂತಂದ್ರು  ನೋಡಿ ಅಮಿತ್ ಶಾ! - Mahanayaka

ಪಶ್ಚಿಮ ಬಂಗಾಳದಲ್ಲಿ ಗೆದ್ದರೆ ಪಶ್ಚಿಮ ಬಂಗಾಳವನ್ನು ಏನು ಮಾಡುತ್ತೇನೆ ಅಂತಂದ್ರು  ನೋಡಿ ಅಮಿತ್ ಶಾ!

07/11/2020

ಪಶ್ಚಿಮಬಂಗಾಳ: ಬಿಜೆಪಿಗೆ ಅಧಿಕಾರ ನೀಡಿದರೆ , ಪಶ್ಚಿಮ ಬಂಗಾಳವನನ್ನು ಐದೇ ವರ್ಷದಲ್ಲಿ ಸುವರ್ಣ ಬಂಗಾಳವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಪ.ಬಂಗಾಳ ಚುನಾವಣೆಗೆ ಇನ್ನು ಕೇವಲ 6 ತಿಂಗಳು ಮಾತ್ರವೇ ಉಳಿದೆ. ಇದೇ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಅಮಿತ್ ಶಾ ಈ ಹೊಸ ಕಾಳು ಹಾಕಿದ್ದಾರೆ. ಹಿಂದೂತ್ವ ಹಾಗೂ ಇನ್ನಿತರ ವಿಚಾರಗಳು ಪಶ್ಚಿಮ ಬಂಗಾಳದಲ್ಲಿ ಫಲಕೊಡದ ಹಿನ್ನೆಲೆಯಲ್ಲಿ ಅಮಿತ್ ಶಾ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬ ವಿಮರ್ಶೆಗಳು  ಕೇಳಿ ಬಂದಿವೆ.

ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ 200ಕ್ಕೂ ಅಧಿಕ ಸೀಟುಗಳೊಂದಿಗೆ ಸರ್ಕಾರ ರಚಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಹೇಗೆ ನಮ್ಮನ್ನು ಜನರು ಆಶೀರ್ವಾದಿಸಿದರೋ ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿಯೂ ಪ.ಬಂಗಾಳ ಜನತೆ ಆಶೀರ್ವಾದಿಸಲಿದ್ದಾರೆ ಎಂದು ಅವರು ಹೇಳಲಿದರು.

ಪಶ್ಚಿಮ ಬಂಗಾಳದಲ್ಲಿನ ಗಡಿಗಳಲ್ಲಿ ಭದ್ರತೆ ಇಲ್ಲ. ಹೀಗಾಗಿ ನುಸುಳುವಿಕೆ ಮುಂದುವರಿದಿದೆ ಎಂದ ಅವರು, ನಮ್ಮ ಮುಖ್ಯ ಗುರಿ ಪಶ್ಚಿಮ ಬಂಗಾಳದ ಅಭಿವೃದ್ಧಿ. ಬಿಜೆಪಿ ಅಧಿಕಾರಕ್ಕೆ ಬಂದ ಐದೇ ವರ್ಷಗಳಲ್ಲಿ ಸುವರ್ಣ ಬಂಗಾಳವನ್ನು ನಿರ್ಮಿಸುತ್ತೇವೆ ಎಂದು ಕೊನೆಗೂ ಕೋಮುವಾದವನ್ನು ಬದಿಗಿಟ್ಟು ಅಭಿವೃದ್ಧಿಯ ವಿಚಾರವಾಗಿ ಅಮಿತ್ ಶಾ ಅವರು ಮಾತನಾಡಿದರು.

ಇತ್ತೀಚಿನ ಸುದ್ದಿ