ಪಾನ್ ಮಸಾಲ ಸೇವಿಸಿ ವಿಧಾನ ಸಭೆಯ ಸಭಾಂಗಣದಲ್ಲೇ ಉಗುಳಿದ ಶಾಸಕ!

ಲಕ್ನೋ: ಉತ್ತರ ಪ್ರದೇಶ ವಿಧಾನ ಸಭೆಯಲ್ಲಿ ವಿಧಾನ ಸಭಾ ಸದಸ್ಯರು ಪಾನ್ ಮಸಾಲ ಸೇವಿಸಿ, ವಿಧಾನ ಸಭೆಯ ಸಭಾಂಗಣದಲ್ಲೇ ಉಗಿದು ಗಲೀಜು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಪಾನ್ ಮಸಾಲ ತಿಂದು ಉಗುಳಿರುವುದನ್ನು ಕಂಡು ಆಕ್ರೋಶಗೊಂಡ ಸಭಾಧ್ಯಕ್ಷರಾದ ಸತೀಶ್ ಮಹಾನಾ ವಿಧಾನ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಸದಸ್ಯರನ್ನು ತರಾಟೆಗೆತ್ತಿಕೊಂಡರು.
ಕಲಾಪಕ್ಕೂ ಮುನ್ನ ಈ ವಿಚಾರ ಪ್ರಸ್ತಾಪಿಸಿದ ಸ್ಪೀಕರ್, ಸದಸ್ಯರೊಬ್ಬರು ವಿಧಾನ ಸೌಧದ ಸಭಾಂಗಣದಲ್ಲೇ ಪಾನ್ ಮಸಾಲ ಸೇವಿಸಿ ಉಗುಳಿದ್ದಾರೆ. ಅದನ್ನು ನಾನೇ ಸ್ವಚ್ಛಗೊಳಿಸಿದೆ. ಆ ಉಗುಳಿದ ಶಾಸಕ ಯಾರು ಅಂತ ನಾನು ವಿಡಿಯೋದಲ್ಲಿ ನೋಡಿದ್ದೇನೆ, ಆದರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ , ಹಾಗಾಗಿ ಹೆಸರು ಪ್ರಸ್ತಾಪಿಸುವುದಿಲ್ಲ ಎಂದರು.
ಇನ್ನು ಮುಂದೆ ಯಾರಾದರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಎಂದು ಎಲ್ಲ ಸದಸ್ಯರಿಗೂ ಒತ್ತಾಯಿಸುತ್ತೇನೆ. ಈ ಸಭೆಯನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ ಎಂದು ನೀತಿ ಪಾಠ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7