ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಸಿಕೊಡುತ್ತಾರೆ: ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ - Mahanayaka

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಸಿಕೊಡುತ್ತಾರೆ: ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ

shivaraj thandagi
25/05/2024

ಕೊಪ್ಪಳ : ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ತಮ್ಮ ದೇವಸ್ಥಾನವನ್ನು ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.


Provided by

ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ಅವರು, ರಾಮನ ದೇಗುಲ ಆಯ್ತು ಇನ್ನು ನನ್ನ ದೇಗುಲ ಅಂತ ಕಟ್ಟಿಕೊಳ್ಳುತ್ತಾರೆ. ಯಾಕೆಂದರೆ ಮೋದಿ ಸ್ಟೇಟ್ಮೆಂಟ್ ಗಳು ಹಾಗೆ ಇವೆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಅಂತ ನರೇಂದ್ರ ಮೋದಿ ಹೇಳುತ್ತಾರೆ. ಜನ ಮತ್ತೊಮ್ಮೆ ಅವಕಾಶ ಕೊಟ್ಟರೆ ಮೋದಿ ದೇಗುಲ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಪ್ರತಿ ಊರಲ್ಲಿ ಮೋದಿ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತದೆ. ಪುರಿ ಜಗನ್ನಾಥರು ಮೋದಿ ಭಕ್ತರು ಅಂತಾರೆ. ಎಲ್ಲಿಗೆ ಬಂದಿದೆ ಸ್ಥಿತಿ ನೋಡಿ. ಮೋದಿ ಸಬ್ ಕಾ ಸಾಥ್ ಅಂತಾರೆ ವೇದಿಕೆಯಲ್ಲಿ ಹಿಂದುತ್ವ ಅಂತಾರೆ ಎಂತಹ ಮಾತನ್ನು ಹಿಂದಿನ ಯಾವ ಪ್ರಧಾನಮಂತ್ರಿಯು ಮಾತಾಡಿಲ್ಲ ಎಂದು ತಂಗಡಗಿ ವಾಗ್ದಾಳಿ ನಡೆಸಿದರು.ಇದು ನರೇಂದ್ರ ಮೋದಿಯವರ ಅಹಂಕಾರದ ಕೊನೆಯ ಹಂತ ಎಂದು ಇದೇ ವೇಳೆ ಸಚಿವ ಶಿವರಾಜ್ ತಂಗಡಿ ವಾಗ್ದಾಳಿ ನಡೆಸಿದರು.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

 

ಇತ್ತೀಚಿನ ಸುದ್ದಿ