ಖ್ಯಾತ ಕ್ರಿಕೆಟಿಗ ನೇಣು ಬಿಗಿದು ಆತ್ಮಹತ್ಯೆ - Mahanayaka

ಖ್ಯಾತ ಕ್ರಿಕೆಟಿಗ ನೇಣು ಬಿಗಿದು ಆತ್ಮಹತ್ಯೆ

17/11/2020

ಢಾಕಾ: ಬಾಂಗ್ಲಾದೇಶದ 19 ವರ್ಷದ ಖ್ಯಾತ ಕ್ರಿಕೆಟಿಗ ಅವಕಾಶ ವಂಚಿತರಾದ ಬಳಿಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೊಹಮ್ಮದ್ ಶಾಜಿಬ್ ಆತ್ಮಹತ್ಯೆಗೆ ಶರಣಾದ ಬಾಂಗ್ಲಾದೇಶದ ಕ್ರಿಕೆಟಿಗ  ಟಿ-20 ಪಂದ್ಯದಲ್ಲಿ ಅವಕಾಶ ದೊರಕಲಿಲ್ಲ ಎಂಬ ಕೊರಗಿನಿಂದ ಇವರು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Shajib

ಶಾಜಿಬ್  ದುರ್ಗಾಪುರದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದುರ್ಗಾಪುರ ಪೊಲೀಸ್ ಠಾಣೆ ಉಸ್ತುವಾರಿ ಹಶ್ಮೋತ್ ಅಲಿ ತಿಳಿಸಿದ್ದಾರೆ.

2017 ರಲ್ಲಿ ಅಂಡರ್ 19 ಏಷ್ಯಾಕಪ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಅವರು ಪ್ರತಿನಿಧಿಸಿದ್ದರು. 2018 ರಲ್ಲಿ ಅಂಡರ್ 19 ವಿಶ್ವಕಪ್ ನಲ್ಲಿ ಸ್ಟ್ಯಾಂಡ್ ಬೈ ಆಟಗಾರರಾಗಿದ್ದರು.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ