ಅಸಮಾಧಾನಕ್ಕೆ ಕಾರಣವಾದ ಮೋಹನ್ ಭಾಗವತ್ ಹೇಳಿಕೆ: ಆರ್ ಎಸ್ ಎಸ್ ಮುಖವಾಣಿ ಪತ್ರಿಕೆಯಲ್ಲಿ ಭಿನ್ನಮತದ ಬರಹ - Mahanayaka

ಅಸಮಾಧಾನಕ್ಕೆ ಕಾರಣವಾದ ಮೋಹನ್ ಭಾಗವತ್ ಹೇಳಿಕೆ: ಆರ್ ಎಸ್ ಎಸ್ ಮುಖವಾಣಿ ಪತ್ರಿಕೆಯಲ್ಲಿ ಭಿನ್ನಮತದ ಬರಹ

26/12/2024

ಅಯೋಧ್ಯೆಯಂತಹ ವಿವಾದಗಳನ್ನು ಇನ್ನಷ್ಟು ಹುಟ್ಟು ಹಾಕಬಾರದು ಮತ್ತು ಇತರ ಮಸೀದಿಗಳ ಮೇಲೆ ಹಕ್ಕು ಚಲಾಯಿಸಬಾರದು ಎಂದು ಹೇಳಿರುವ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಅಭಿಪ್ರಾಯಕ್ಕೆ ಆರ್ ಎಸ್ ಎಸ್ ನದ್ದೇ ಮುಖವಾಣಿ ಪತ್ರಿಕೆಯಾದ ಆರ್ಗನೈಸರ್ ನಲ್ಲಿ ಅಸಮಾಧಾನದ ಲೇಖನ ಪ್ರಕಟವಾಗಿದೆ.

ಸೋಮನಾಥದಿಂದ ಸಂಭಾಲ್ ಮಸೀದಿಯವರೆಗೆ ಮತ್ತು ಅದರ ಆಚೆಗೂ ಇತಿಹಾಸದ ಸತ್ಯಗಳನ್ನು ತಿಳಿದುಕೊಳ್ಳುವುದಕ್ಕೆ ಮತ್ತು ನಾಗರಿಕ ನ್ಯಾಯ ಪಡೆಯುವುದಕ್ಕೆ ಮಾಡಲಾಗುತ್ತಿರುವ ಹೋರಾಟ ಇದು ಎಂದು ಮಸೀದಿಯ ಮೇಲೆ ಹಕ್ಕು ಸ್ಥಾಪಿಸುವವರ ಪರವಾಗಿ ಲೇಖನದಲ್ಲಿ ವಾದ ಮಂಡಿಸಲಾಗಿದೆ.


ADS

ಆರ್ ಎಸ್ ಎಸ್ ನ ಮುಖವಾಣಿಯೇ ಮೋಹನ್ ಭಾಗವತ್ ಅವರ ಹೇಳಿಕೆಗೆ ಅಸಮಾಧಾನ ಸೂಚಿಸುವ ರೀತಿಯಲ್ಲಿ ಮತ್ತು ಅವರಿಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದರಿಂದ ಆರ್ ಎಸ್ ಎಸ್ ನೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಇದನ್ನು ಆಧಾರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಹಿಂದೂ ಧಾರ್ಮಿಕ ಮುಖಂಡರು ಮತ್ತು ಶಂಕರಾಚಾರ್ಯರು ಕೂಡ ಭಾಗವತ್ ರ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ವಿಷಯದಲ್ಲಿ ಪಾಠ ಮಾಡುವುದಕ್ಕೆ ಆರ್ ಎಸ್ ಎಸ್ ಬರಬೇಕಾಗಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಇದೀಗ ಆರ್ಗನೈಸರ್ ಕೂಡ ಭಾಗವತ್ ಅವರ ಹೇಳಿಕೆಯಿಂದ ದೂರ ನಿಂತಿರುವುದನ್ನು ನೋಡಿದರೆ ಶೀಘ್ರದಲ್ಲೇ ಭಾಗವತ್ ಅವರ ಹೊಣೆಗಾರಿಕೆಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ