ಮೂಡುಬಿದಿರೆ: ಏ.14ರಂದು ಜೈ ಭೀಮ್ ಸೇನೆ ಕರ್ನಾಟಕ ವತಿಯಿಂದ ಅದ್ದೂರಿಯ ಅಂಬೇಡ್ಕರ್ ಜಯಂತಿ - Mahanayaka

ಮೂಡುಬಿದಿರೆ: ಏ.14ರಂದು ಜೈ ಭೀಮ್ ಸೇನೆ ಕರ್ನಾಟಕ ವತಿಯಿಂದ ಅದ್ದೂರಿಯ ಅಂಬೇಡ್ಕರ್ ಜಯಂತಿ

ambedkar jayanti
10/04/2025

ದಕ್ಷಿಣ ಕನ್ನಡ/ ಮೂಡುಬಿದಿರೆ: ಜೈ ಭೀಮ್ ಸೇನೆ ಕರ್ನಾಟಕ ರಾಜ್ಯ ಸಮಿತಿ ಮೂಡುಬಿದಿರೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಏಪ್ರಿಲ್ 14ರಂದು ಜಿಲ್ಲಾಮಟ್ಟದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ನಡೆಯಲಿದೆ.


Provided by

ಅಂದು ಸಂಜೆ 4 ಗಂಟೆಯಿಂದ ವಾಹನ ಜಾಥಾ ಆರಂಭಗೊಳ್ಳಲಿದ್ದು,  ಮೂಡುಬಿದಿರೆಯ ಸ್ವರಾಜ್ಯ ಮೈದಾನದಿಂದ ಅಲಂಗಾರ್ ನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ವೇದಿಕೆಯವರೆಗೆ ಜಾಥಾ ಸಾಗಲಿದೆ. ಬಳಿಕ ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂವಿಧಾನ ಶಿಲ್ಪಿಯ ಜನ್ಮದಿನಾಚರಣೆಯನ್ನು ಹಬ್ಬದಂತೆ ಆಚರಿಸಲು ತೀರ್ಮಾನಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ