ಹೋರಾಟಗಾರ ಹಲೀಲಿಯನ್ನು ಹತ್ಯೆ ಮಾಡಿದ ಇಸ್ರೇಲ್: ಅಂತಿಮ ಯಾತ್ರೆಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಫೆಲಿಸ್ತೀನಿಯರು ಭಾಗಿ
ಶಾಂತಿಯುತ ಮತ್ತು ಹಿಂಸಾ ರಹಿತ ಹೋರಾಟಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದ ಫೆಲೆಸ್ತೀನಿನ ಪಶ್ಚಿಮ ದಂಡೆಯ ಝಿಯಾದ್ ಅಬು ಹಲೀಲಿ ಅವರನ್ನು ಇಸ್ರೇಲಿ ಯೋಧರು ಥಳಿಸಿ ಅಕ್ಟೋಬರ್ ಏಳರಂದು ಹತ್ಯೆಗೈದಿದ್ದರು. ಅವರ ಅಂತಿಮ ಯಾತ್ರೆಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಫೆಲಿಸ್ತೀನಿಯರು ಭಾಗಿಯಾಗಿ ಅವರಿಗೆ ಗೌರವವನ್ನು ಅರ್ಪಿಸಿದ್ದರು. ಇಸ್ರೇಲ್ ಹೇಗೆ ಶಾಂತಿಯುತ ಹೋರಾಟವನ್ನೂ ನಿಗ್ರಹಿಸುತ್ತಿದೆ ಅನ್ನೋದಕ್ಕೆ ಈ ಹಲೀಲಿ ಒಂದು ಒಳ್ಳೆಯ ಉದಾಹರಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2014ರಲ್ಲಿ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ವೇಳೆ ಇಸ್ರೇಲ್ ಯೋಧರು ಗುಂಡು ಹಾರಿಸದಂತೆ ಜನರಿಗೆ ಅಡ್ಡಲಾಗಿ ನಿಂತು ಇವರು ಜಾಗತಿಕ ಗಮನವನ್ನು ಸೆಳೆದಿದ್ದರು. ಆಕ್ರಮಿತ ಪಶ್ಚಿಮ ದಂಡೆಯನ್ನು ಇವರು ತಮ್ಮ ಹೋರಾಟದ ರಣಭೂಮಿಯಾಗಿ ಮಾಡಿಕೊಂಡಿದ್ದು ಹೆಬ್ರೋನ್ ನ ಅವರ ಮನೆಗೆ ತೆರಳಿದ ಇಸ್ರೇಲಿ ಯೋಧರು ಅವರನ್ನು ಥಳಿಸಿ ಹತ್ಯೆಗೈದಿದ್ದಾರೆ. ಇಸ್ರೇಲಿನ ಅತಿಕ್ರಮಣದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಅನೇಕ ಬಾರಿ ಹಮ್ಮಿಕೊಂಡು ಇವರು ಜನ ಪ್ರೀತಿಗೆ ಪಾತ್ರರಾಗಿದ್ದರು.
2016ರಲ್ಲಿ ಇವರು ನಡೆಸಿದ ಪ್ರತಿಭಟನೆ ಬಹಳ ಗಮನ ಸೆಳೆದಿತ್ತು. ಹೆಬ್ರೋನ್ ನಲ್ಲಿರುವ ಇಸ್ರೇಲಿ ಚಕ್ ಪಾಯಿಂಟ್ ನ ಎದುರು 10000ಕ್ಕಿಂತಲೂ ಅಧಿಕ ಜನರನ್ನು ಸೇರಿಸಿ ಇವರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಇಸ್ರೇಲಿ ಯೋಧರು ಹತ್ಯೆಗೈದ ಫೆಲೆಸ್ತೀನಿಯರ ಪಾರ್ಥಿವ ಶರೀರವನ್ನು ಮರಳಿಸುವಂತೆ ಅವರು ಈ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು. ಆ ಬಳಿಕ ಇಸ್ರೇಲ್ 17 ಮಂದಿಯ ಶರೀರವನ್ನು ಬಿಟ್ಟುಕೊಟ್ಟಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj