ನಾವು ನಡೆದಿದ್ದೇ ದಾರಿ, ನಡಿ ಮಗಾ… | ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
ಚಿಕ್ಕಮಗಳೂರು: ಯಾರಿಗೂ… ಯಾವ್ದುಕ್ಕೂ ಹೆದ್ರುಬಾರ್ದು ನಡೀ ಮಗಾ… ನಾವು ಹೋಗಿದ್ದೆಲ್ಲಾ ನಮ್ದೆ ದಾರಿ… ನಾವು ನಡೆದಿದ್ದೇ ದಾರಿ… ಅಡ್ಡ ಸಿಕ್ಕಿದ್ದೆಲ್ಲವನ್ನೂ ತುಳ್ಕೊಂಡು, ತಳ್ಕೊಂಡು ನುಗ್ತಿರ್ಬೇಕು ಹೀಗಂತಾ ತಾಯಿ ಆನೆಯೊಂದು ತನ್ನ ಮರಿಯನ್ನ ಕಾಡಿನ ದಾರಿಯಲ್ಲಿ ನಡೆಸುತ್ತಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಮಾರಿಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂತು. ಕಾಫಿನಾಡಲ್ಲಿ ಬೀಡು ಬಿಟ್ಟಿರೋ 22 ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗ್ ನ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಬಿದ್ದಿದ್ದು, ಆನೆಗಳ ಹಿಂಡು ಸಾಗಿದಲ್ಲೆಲ್ಲ ಡ್ರೋನ್ ಕ್ಯಾಮರಾ ಕಾವಲು ಕಾಯುತ್ತಿದೆ.
ಡ್ರೋನ್ ಕ್ಯಾಮರಾಮದಲ್ಲಿ ಇದೀಗ ಆನೆಗಳ ಪ್ರಪಂಚದ ಮನಮೋಹಕ ದೃಶ್ಯ ಸೆರೆಯಾಘಿದೆ. ಕಾಡಲ್ಲಿ ಮರಿ ಆನೆಗೆ ತಾಯಿ ಆನೆ ನಡೆಯುವುದನ್ನ ಕಲಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೊಂಡಿಲಿನಲ್ಲಿ ತಳ್ಳಿ…ತಳ್ಳಿ… ಮರಿಗೆ ತಾಯಿ ಆನೆ ನಡೆಯೋದನ್ನ ಕಲಿಸುತ್ತಿರುವುದು ಕಂಡು ಬಂದಿದೆ. ಅಂದಾಜು 4 ದಿನದ ಮರಿ ಆನೆಗೆ ನುಗ್ಗೋ ಧೈರ್ಯ ಕಲಿಸುತ್ತಿರುವ ದೃಶ್ಯ ಕಂಡು ಬಂತು.
ಚಿಕ್ಕಮಗಳೂರು ತಾಲೂಕಿನ ಮಾರಿಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂತು. ಕಾಫಿನಾಡಲ್ಲಿ ಬೀಡು ಬಿಟ್ಟಿರೋ 22 ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗ್ , ಕಳೆದ 20 ದಿನಗಳಿಂದ ಭಾರೀ ಪ್ರಮಾಣದಲ್ಲಿ ದಾಂಧಲೆ ಮಾಡ್ತಿದೆ. ಆಲ್ದೂರು, ತುಡುಕೂರು, ವಸ್ತಾರೆ ಭಾಗದಲ್ಲಿ ಆನೆಗಳ ಹಿಂಡು ಭಾರೀ ಹಾನಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: