ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪಿನಿಂದ ಹಲ್ಲೆ - Mahanayaka
3:01 AM Thursday 12 - December 2024

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪಿನಿಂದ ಹಲ್ಲೆ

mp kumaraswamy
20/11/2022

ಮೂಡಿಗೆರೆ: ಹುಲ್ಲೆಮನೆ ಕುಂದೂರಿನಲ್ಲಿ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಹರಿದ ಶರ್ಟ್ ನೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕುಮಾರಸ್ವಾಮಿ,  ಬೇಕೂಂತ ಗುಂಪು ರೆಡಿ ಮಾಡಿ ಸಂಚು ಮಾಡಿದ್ದು, ಶಾಸಕರೇ ಆನೆ ಸಾಕಿದ್ದಾರೆ ಅಂತ  ಜನ ಹೊರ ಸೂಸಿದ್ರು,  ಕೋರ್ಟ್ ಸರ್ಕಾರ ಆನೆ ಬಗ್ಗೆ ಏನು ಹೇಳುತ್ತದೆ  ಇಡೀ ರಾಜ್ಯಕ್ಕೆ ಗೊತ್ತು. ಇಡೀ ದೇಶಕ್ಕೆ ಗೊತ್ತು ಎಂದರು.

ಸಂಚು ಮಾಡಿ ನನ್ನ ಮೇಲೆ ಈ ಥರ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಕೂಡ ಇದೆ. ಪೊಲೀಸರು ಕೇವಲ 10ರಷ್ಟಿದ್ದರು. ನಾನು ಅಲ್ಲೇ ಕದಲದೇ ನಿಂತಿದ್ದೆ ಆದರೆ ಪೊಲೀಸರು ನನ್ನನ್ನು ಮಿಸ್ ಗೈಡ್ ಮಾಡಿ ಹೋಗಿ ಸರ್ ಅಂದ್ರು. ನಾನು ಸಾರ್ವಜನಿಕರ ಸೇವೆ ಮಾಡಲು ಇರೋದು. ನಾನು ಜಾಗ ಬಿಟ್ಟು ಕದಲುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ