ಮುಸ್ಲಿಂ ವ್ಯಕ್ತಿಯನ್ನು ಸುತ್ತುವರಿದು ಜೈ ಶ್ರೀರಾಮ್ ಎಂದು ಹೇಳುವಂತೆ ಬಲವಂತ ಪ್ರಕರಣ: ಬಾಂಬೆ ಹೈಕೋರ್ಟ್ ನಿಂದ ಸ್ಪಷ್ಟನೆ - Mahanayaka
4:29 PM Thursday 18 - September 2025

ಮುಸ್ಲಿಂ ವ್ಯಕ್ತಿಯನ್ನು ಸುತ್ತುವರಿದು ಜೈ ಶ್ರೀರಾಮ್ ಎಂದು ಹೇಳುವಂತೆ ಬಲವಂತ ಪ್ರಕರಣ: ಬಾಂಬೆ ಹೈಕೋರ್ಟ್ ನಿಂದ ಸ್ಪಷ್ಟನೆ

30/01/2025

ಮುಸ್ಲಿಂ ವ್ಯಕ್ತಿಯನ್ನು ಸುತ್ತುವರಿದು ಜೈ ಶ್ರೀರಾಮ್ ಎಂದು ಘೋಷಿಸುವಂತೆ ಬಲವಂತಪಡಿಸಿದ್ದ ಪ್ರಕರಣವನ್ನು ತಾನು ವರ್ಗಾವಣೆ ಮಾಡಿರುವುದಾಗಿ ಬಾಂಬೆ ಹೈಕೋರ್ಟಿಗೆ ಮಹಾರಾಷ್ಟ್ರ ಸರಕಾರ ಮಾಹಿತಿ ನೀಡಿದೆ. 2024 ಜನವರಿ 19ರಂದು ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳ ಒಂದು ಗುಂಪು ಶೈಕ್ ಮತ್ತು ಅವರ ಪತ್ನಿಯನ್ನು ಸುತ್ತುವರಿದು ಈ ರೀತಿಯಲ್ಲಿ ಬಲವಂತಪಡಿಸಿತ್ತು.


Provided by

ರೈಲ್ವೆ ಸ್ಟೇಷನ್ ನಲ್ಲಿ ತಾನು ಸಹಾಯ ಯಾಚಿಸಿದ ಬಳಿಕ ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆದರೆ ಬಿಜೆಪಿ ಶಾಸಕ ನಿತೀಶ್ ರಾಣೆ ಮಧ್ಯಪ್ರವೇಶಿಸಿದರು ಮತ್ತು ತನ್ನ ವಿರುದ್ಧವೇ ಪ್ರಕರಣವನ್ನು ದಾಖಲಿಸಲಾಯಿತು ಎಂದು ಶೇಕ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನ ಪ್ರಕರಣವನ್ನ ಕಂಕವಾಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿತ್ತು ಮತ್ತು ತನ್ನ ವಾಹನಕ್ಕೆ ಹಾನಿ ಮಾಡಲಾಗಿತ್ತು ಎಂದು ಶೈಖ್ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಅವರು ಇದೀಗ ಶೈಕ್ ಅವರ ಆಗ್ರಹದಂತೆ ಈ ಪ್ರಕರಣವನ್ನು ಕಂಕವಲಿ ಪೊಲೀಸ್ ಠಾಣೆಯಿಂದ ಕುಡಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಈ ಕುಡಲ್ ಪೊಲೀಸ್ ಠಾಣೆಯು ಬಿಜೆಪಿ ಎಂಎಲ್ಎ ನಿಲೇಶ್ ರಾಣೆ ಅವರ ಕ್ಷೇತ್ರವಾಗಿದೆ ಎಂದು ಶೇಕ್ ಅವರನ್ನು ಪ್ರತಿನಿಧಿಸುವ ನ್ಯಾಯವಾದಿ ಗೌತಮ್ ನ್ಯಾಯಾಲಯಕ್ಕೆ ತಿಳಿಸಿದರು. ಶೈಖ್ ಅವರಿಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆಯನ್ನು ಅಧ್ಯಯನದ ಬಳಿಕ ಹಿಂಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಒಂದು ವೇಳೆ ಶೈಕ್ ಅವರು ಬಯಸಿದರೆ ಅವರಿಗೆ ಪೊಲೀಸ ರಕ್ಷಣೆಯನ್ನು ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ