ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನು ಬುಲ್ಡೋಜರ್ ಬಳಸಿ ಧ್ವಂಸ - Mahanayaka

ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನು ಬುಲ್ಡೋಜರ್ ಬಳಸಿ ಧ್ವಂಸ

28/02/2025


Provided by

ಮಹಾರಾಷ್ಟ್ರದಲ್ಲಿ ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನು ಮಲ್ವಾನ್ ಮುನ್ಸಿಪಲ್ ಕಾರ್ಪೊರೇಷನ್ ಬುಲ್ಡೋಜರ್ ಬಳಸಿ ಧ್ವಂಸ ಮಾಡಿದೆ. ಈ ಕೃತ್ಯವನ್ನು ಸ್ಥಳೀಯರು ಖಂಡಿಸಿದ್ದು ಇದು ಬುಲ್ಡೋಜರ್ ರಾಜ್ ನ ಮುಂದುವರಿಕೆಯಾಗಿದೆ ಎಂದು ದೂರಿದ್ದಾರೆ ಮಾತ್ರ ಅಲ್ಲ ಕೋಮು ಪಕ್ಷಪಾತವೇ ಇದಕ್ಕೆ ಕಾರಣ ಎಂದವರು ಹೇಳಿದ್ದಾರೆ.


Provided by

ಉತ್ತರ ಪ್ರದೇಶದಿಂದ 15 ವರ್ಷಗಳ ಹಿಂದೆ ವಲಸೆ ಬಂದಿರುವ ಈ ಮುಸ್ಲಿಂ ಕುಟುಂಬದ ಮನೆ ಮತ್ತು ಶಾಪನ್ನು ಧ್ವ9ಸ ಗೊಳಿಸಲಾಗಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತ ಸಚಿನ್ ವರದ್ಕರ್ ಅವರ ದೂರಿನಂತೆ ಈ ಕ್ರಮವನ್ನ ಸ್ಥಳೀಯ ಮುನ್ಸಿಪಾಲಿಟಿ ಕೈಗೊಂಡಿದೆ.

ಭಾರತ ಪಾಕಿಸ್ತಾನ ನಡುವಿನ ಪಂದ್ಯಾಟದ ವೇಳೆ ಈ ಮನೆಯ 15 ವರ್ಷದ ಹುಡುಗ ದೇಶದ್ರೋಹಿ ಘೋಷಣೆ ಕೂಗಿದ್ದಾನೆ ಎಂದು ಸಚಿನ್ ಆರೋಪಿಸಿದ್ದ. ಈ ಆರೋಪದ ಮೇಲೆ ಪೊಲೀಸರು ಈ ಬಾಲಕನನ್ನ ಬಂಧಿಸಿದ್ದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು . ಆ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ಇವರ ಮನೆಯನ್ನು ದ್ವಂಸಗೊಳಿಸುವ ಕ್ರಮಕ್ಕೆ ಮುಂದಾಯಿತು.


Provided by

ಕಾನೂನುಬಾಹಿರವಾಗಿ ಮನೆ ಮತ್ತು ಶಾಪನ್ನು ನಿರ್ಮಿಸಲಾಗಿದೆ ಎಂದು ಅದು ಇದೀಗ ಸಮರ್ಥಿಸಿದೆ. ಇದೇ ವೇಳೆ ಈ ಕ್ರಮವು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಅವರ ಕುಮ್ಮಕಿನಿಂದ ದ್ವಂಸ ಕ್ರಿಯೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವರು ಮುಸ್ಲಿಂ ದ್ವೇಷಕ್ಕೆ ಕುಪ್ರಸಿದ್ಧಿಯನ್ನು ಹೊಂದಿದ್ದು ಈ ಮನೆಯನ್ನು ಧ್ವಂಸಗೊಳಿಸುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ