ಕ್ರೌರ್ಯ: ಮುಸ್ಲಿಂ ಯುವಕನನ್ನು ಥಳಿಸಿ ಪೆರೇಡ್; ಬೆಚ್ಚಿಬಿದ್ದ ದೇಶ - Mahanayaka
5:39 PM Saturday 7 - December 2024

ಕ್ರೌರ್ಯ: ಮುಸ್ಲಿಂ ಯುವಕನನ್ನು ಥಳಿಸಿ ಪೆರೇಡ್; ಬೆಚ್ಚಿಬಿದ್ದ ದೇಶ

11/11/2024

ಉತ್ತರಾಖಂಡದ ರಿಷಿಕೇಶದಲ್ಲಿ ಮುಸ್ಲಿಂ ಯುವಕನನ್ನು ಥಳಿಸಿ ಪೆರೇಡ್ ನಡೆಸಲಾದ ಭಯಾನಕ ಘಟನೆ ನಡೆದಿದೆ. ಕ್ಷೌರಿಕ ವೃತ್ತಿಯ ಶಾಹಿದ್ ಎಂಬ ಈ ಯುವಕನು ಲವ್ ಜಿಹಾದ್ ನಡೆಸಿದ್ದಾನೆ ಎಂದು ಆರೋಪಿಸಿ ಈ ಕ್ರೌರ್ಯ ನಡೆದಿದೆ ಎಂದು ವರದಿಯಾಗಿದೆ.

ಶಾಹಿದ್ ನ ಸೆಲೂನಿನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕ್ಷೌರಿಕೆಯನ್ನು ಲವ್ ಜಿಹಾದ್ ಗೆ ಬೀಳಿಸಲು ಶಾಹಿದ್ ಕ್ಷಮಿಸಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ.
ಶಾಹಿದ್ ನನ್ನು ರಸ್ತೆಯುದ್ಧಕ್ಕೂ ಮೆರವಣಿಗೆ ಮಾಡಿಕೊಂಡು ಹೋಗಿರುವುದಲ್ಲದೆ ಜೈ ಶ್ರೀರಾಮ್ ಎಂದು ಗುಂಪು ಘೋಷಿಸುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆ ಬಳಿಕ ಶಾಹಿದ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಉತ್ತರಾಖಂಡದಲ್ಲಿ ಮುಸ್ಲಿಮರನ್ನು ಹಿಂಸಿಸುವ ಮತ್ತು ವಿವಿಧ ಹೆಸರಲ್ಲಿ ಥಳಿಸುವ ಹಲವಾರು ಘಟನೆಗಳು ಈ ಮೊದಲೂ ನಡೆದಿವೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ