ಹೋಟೆಲ್ ಗೆ ನುಗ್ಗಿ ಹೊಡೆಯುತ್ತೇವೆ: ಹೊಸ ವರ್ಷಾಚರಣೆ ಮಾಡುವವರಿಗೆ ಮುತಾಲಿಕ್ ಎಚ್ಚರಿಕೆ - Mahanayaka

ಹೋಟೆಲ್ ಗೆ ನುಗ್ಗಿ ಹೊಡೆಯುತ್ತೇವೆ: ಹೊಸ ವರ್ಷಾಚರಣೆ ಮಾಡುವವರಿಗೆ ಮುತಾಲಿಕ್ ಎಚ್ಚರಿಕೆ

pramod muthalik
30/12/2024

ಬಾಗಲಕೋಟೆ: ಹೊಸ ವರ್ಷ ಆಚರಣೆ ಮಾಡುವವರಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದು, ಡಿ. 30, 31 ರಂದು ಬಾರ್ ಬಂದ್ ಮಾಡಬೇಕು. ಇಲ್ಲವಾದರೆ ಇಂತಹ ಹೋಟೆಲ್ ಗೆ ನುಗ್ಗಿ ಹೊಡೆಯುತ್ತೇವೆ ಎಂದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಹಿಂದು ಸಂಪ್ರದಾಯ ಸಂಸ್ಕೃತಿ, ಧರ್ಮದ ಪ್ರಕಾರ, ವೈಜ್ಞಾನಿಕ ಹಾಗೂ ಪಂಚಾಂಗದ ಪ್ರಕಾರ ನಮಗೆ ಯುಗಾದಿ ಹೊಸ ವರ್ಷ. ಆದ್ರೆ ಬ್ರಿಟಿಷರು, ಕ್ರಿಶ್ಚಿಯನ್ಸ್ ಹಾಕಿದ ಈ ಪರಂಪರೆ ಜನವರಿ 1 ಹೊಸ ವರ್ಷ ಅನ್ನೋದು ಅವೈಜ್ಞಾನಿಕ. ಆದರೆ ನಮಗೆ ಯುಗಾದಿ ಹೊಸವರ್ಷ. ಆದ್ದರಿಂದ ಈ ರೀತಿಯ ಪಾರ್ಟಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.


ADS

ಡಿಸೆಂಬರ್ 31 ರಂದು ಕುಡಿದು ಕುಪ್ಪಳಸಿ, ಡ್ರಗ್ಸ್, ರೇಪ್, ಅಶ್ಲೀಲವಾಗಿ ಆಚರಣೆ ಮಾಡುವಂತಹದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದರ ವಿರುದ್ದ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಮಾಜಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ ನಿಧನದಿಂದ ಈಗ ದೇಶದಲ್ಲಿ 7 ದಿದ ಶೋಕಾಚರಣೆ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ, ಇಡೀ ಕರ್ನಾಕದಲ್ಲಾಗಲಿ, ದೇಶದಲ್ಲಿ ಹೇಗೆ ಹೊಸ ವರ್ಷಾಚರಣೆ ಮಾಡ್ತೀರಿ? ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಇದನ್ನು ಕೂಡಲೇ ನಿಲ್ಲಿಸಬೇಕು, ಇದು ಇಡೀ ರಾಜ್ಯದಲ್ಲಿ ಅನ್ವಯ ಮಾಡಬೇಕು. ಡಿ. 30, 31 ರಂದು ಬಾರ್ ಬಂದ್ ಮಾಡಬೇಕು. ಇದರಿಂದಲ್ಲೇ ಈ ರೀತಿಯ ಘಟನೆಗಳು ನಡೆಯುತ್ತಿರೋದು. ಇಲ್ಲವಾದರೆ ಇಂತಹ ಹೋಟೆಲ್ಗೆ ನುಗ್ಗಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಡೀ ರಾಜ್ಯದಲ್ಲಿ ಶ್ರೀರಾಮ ಸೇನೆ ಸಂಘಟನೆ ಮತ್ತು ಇತರ ಎಲ್ಲಾ ಹಿಂದೂ ಸಂಘಟನೆಗಳು ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸೋದು ಗ್ಯಾರಂಟಿ ಎಂದು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ