ನಾನು ಸತ್ತರೆ ಮುಖ್ಯಮಂತ್ರಿಯವರೇ ಕಾರಣ | ಸಿಎಂ ಯಡಿಯೂರಪ್ಪ ವಿರುದ್ಧ ಸ್ವಾಮೀಜಿ ಆಕ್ರೋಶ - Mahanayaka
9:56 AM Thursday 14 - November 2024

ನಾನು ಸತ್ತರೆ ಮುಖ್ಯಮಂತ್ರಿಯವರೇ ಕಾರಣ | ಸಿಎಂ ಯಡಿಯೂರಪ್ಪ ವಿರುದ್ಧ ಸ್ವಾಮೀಜಿ ಆಕ್ರೋಶ

09/02/2021

ದಾವಣಗೆರೆ: “ನಾನು ಸತ್ತರೆ ಅದಕ್ಕೆ ನೀವೇ ಹೊಣೆ” ಎಂದು ಪ್ರಸನ್ನಾನಂದ ಸ್ವಾಮೀಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ವಾಲ್ಮೀಕಿ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಆಗ್ರಹಿಸಿದ ಸ್ವಾಮೀಜಿ, ವೇದಿಕೆಯ ಮೇಲಿದ್ದ ಸಿಎಂ ಯಡಿಯೂರಪ್ಪನವರನ್ನುದ್ದೇಶಿಸಿ ಮಾತನಾಡಿದರು.

ನಾನು ಮಾರ್ಚ್ ಒಂದರಿಂದ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.  ನಾನು ಸತ್ತರೆ ನೀವೇ ಹೊಣೆ ಎಂದು ಸ್ವಾಮೀಜಿ ಹೇಳಿದರು. ‘ಸಿಎಂ ಬಿ.ಎಸ್.ಯಡಿಯೂರಪ್ಪನವರು ಚುನಾವಣೆ ವೇಳೆ ಮೀಸಲಾತಿ ಭರವಸೆ ನೀಡಿದರು. ಆದ್ರೆ, ಈವರೆಗೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಟಿ ಸಮುದಾಯ ಎಂದರೆ ತಾತ್ಸಾರವೇ? ನಾವು ಸಿಎಂ ಅವರ ಬಳಿ ಸಮಸ್ಯೆಗಳನ್ನು ಹೇಳದೇ ಇನ್ಯಾರ ಬಳಿ ಹೇಳಬೇಕು? ನಮ್ಮ ಬೇಡಿಕೆಗಳನ್ನು ಬೇಗನೇ ಈಡೇರಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.




ಇತ್ತೀಚಿನ ಸುದ್ದಿ