ನಾರಾಯಣಗುರು ಬಾರದೇ ಇರುತ್ತಿದ್ದರೆ ಇಂದಿಗೂ ಮೇಲ್ವರ್ಗದ ಗಂಡಸರಿಗೆ ಹೆಣ್ಣು ಮಕ್ಕಳು ಸೆರಗು ಸರಿಸುವ ದುಸ್ಥಿತಿ ಇರುತ್ತಿತ್ತು! - Mahanayaka
4:59 PM Wednesday 10 - September 2025

ನಾರಾಯಣಗುರು ಬಾರದೇ ಇರುತ್ತಿದ್ದರೆ ಇಂದಿಗೂ ಮೇಲ್ವರ್ಗದ ಗಂಡಸರಿಗೆ ಹೆಣ್ಣು ಮಕ್ಕಳು ಸೆರಗು ಸರಿಸುವ ದುಸ್ಥಿತಿ ಇರುತ್ತಿತ್ತು!

17/10/2020

ಜಾತಿ ಬೇಧದಿಂದ ನಲುಗಿ ಹೋಗಿದ್ದ ಕೇರಳದಲ್ಲಿ ಆಗಲೇ ನಾರಾಯಣಗುರುಗಳು ಕೇರಳದ ತೀಯಾ ಸಮಾಜ ದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಮಗನಾಗಿ ಜನಿಸುತ್ತಾರೆ. ಕೇರಳ ರಾಜ್ಯ ಆಗ ಈಗಿನಂತೆ ಜಾತ್ಯತೀತೆಯಿಂದ ಕೂಡಿರಲಿಲ್ಲ. ಅಲ್ಲಿ ಸದ್ಯ ಉತ್ತರ ಪ್ರದೇಶದಲ್ಲಿ ಹೇಗೆ ಅಸ್ಪೃಷ್ಯತೆ, ಅಸಮಾನತೆ, ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದೆಯೋ ಅದಕ್ಕಿಂತಲೂ ದುಪ್ಪಟ್ಟು ಅನ್ಯಾಯಗಳು ನಡೆಯುತ್ತಿದ್ದ ಕಾಲವದು. ಈ ಕಾಲದಲ್ಲಿ ನಾರಾಯಣಗುರುಗಳು ಅಲ್ಲಿನ ಜನತೆಗೆ ಅರಿವಿನ ಬೆಳಕನ್ನು ನೀಡಿ, ಸಮಾಜವನ್ನು ಬದಲಿಸಿದವರಾಗಿದ್ದಾರೆ.


Provided by

ಸಮಾಜದಲ್ಲಿ ಮೇಲು ಕೀಲು ವಿಜೃಂಬಿಸುತ್ತಿದ್ದ ಸಂದರ್ಭದಲ್ಲಿ ನಾರಾಯಣಗುರುಗಳು ವಿರೋಧಾಭಾಸಗಳಿಗೆ ಸೆಡ್ಡು ಹೊಡೆದು ನಿಂತರು. ಅಸ್ಪೃಷ್ಯರಿಗೆ ಬ್ರಾಹ್ಮಣರು ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿದ್ದ ಸಂದರ್ಭದಲ್ಲಿ ನಾರಾಯಣಗುರುಗಳು, ಹಿಂಸಾಚಾರದ ಹೋರಾಟವನ್ನು ನಡೆಸದೆ, ಅಸ್ಪೃಷ್ಯರು ಬೇರೆಯೇ ದೇವಸ್ಥಾನವನ್ನು ಕಟ್ಟಿಕೊಂಡು ನೀವೇ ಪೂಜೆ ಮಾಡಿಕೊಳ್ಳಿ ಎಂದು ಹೇಳಿದವರು. ಕರ್ನಾಟಕದ ಮಂಗಳೂರಿನಲ್ಲಿರುವ ಗೋಕರ್ಣನಾಥ ದೇವಸ್ಥಾನ ಕೂಡ ನಾರಾಯಣಗುರುಗಳ ಆಣತಿಯಂತೆಯೇ ಆರಂಭವಾಯಿತು ಎಂದು ಹೇಳಲಾಗುತ್ತಿದೆ. ದೇವಸ್ಥಾನ ಪ್ರವೇಶ ಎನ್ನುವುದು ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿತ್ತು.  ಆದರೆ, ತಮ್ಮ ಹೊಸ ಯೋಚನೆಗಳ ಮೂಲಕವೇ ನಾರಾಯಣಗುರುಗಳು ಬ್ರಾಹ್ಮಣದ ಪಾರಮ್ಯದಲ್ಲಿದ್ದ ದೇವಸ್ಥಾನಕ್ಕಿಂತಲೂ ಅಧಿಕ ದೇವಸ್ಥಾನಗಳು ಅಂದರೆ, 60ಕ್ಕೂ ಹೆಚ್ಚು ದೇವಸ್ಥಾನಗಳನ್ನು ತಾವೇ ಸ್ಥಾಪಿಸುವ ಮೂಲಕ ಬೇಧ-ಭಾವದ ಅನಾಗರಿಕ ಸಂಸ್ಕೃತಿಗೆ ಸೆಡ್ಡು ಹೊಡೆದರು.

ಈಳವ ಮತ್ತಿತರ ಅಸ್ಪೃಷ್ಯ ಸಮುದಾಯದ ಸ್ತ್ರೀಯರು ತಮ್ಮ ಎದೆಯನ್ನು ಮುಚ್ಚಬಾರದು. ಮೇಲ್ವರ್ಗದವರು ಬರುವಾಗ ಹೆಣ್ಣು ಮಕ್ಕಳು ತಮ್ಮ ಸೆರಗು ಸರಿಸಿ ಅವರಿಗೆ ತೋರಿಸಿ ಗೌರವ ಸೂಚಿಸಬೇಕು ಎನ್ನುವ ಕೆಟ್ಟ ಸಂಪ್ರದಾಯವನ್ನು ಆ ಕಾಮ ಪಿಶಾಚಿಗಳು ಹೇರಿದ್ದರು. ಇದರ ವಿರುದ್ಧ ಜಾಗೃತಿ ಮೂಡಿಸಿದ ನಾರಾಯಣಗುರುಗಳು, ಇದೊಂದು ಅನಿಷ್ಠ ಪದ್ಧತಿ ಈ ರೀತಿಯಾಗಿ ಯಾರೂ ನಡೆದುಕೊಳ್ಳಬಾರದು ಎಂದು ಈ ಸಮುದಾಯಗಳಿಗೆ ಬೋಧಿಸಿದರು.  ನಾರಾಯಣಗುರುಗಳ ಬೋಧನೆಯನ್ನು ಶೋಷಿತ ಸಮುದಾಯಗಳು ಪಾಲಿಸುತ್ತಿದ್ದರು. ಇದರಿಂದಾಗಿ  ಮೇಲ್ವರ್ಗದ ಕಾಮ ಪಿಶಾಚಿಗಳ ಕಾಮಕೃತ್ಯಗಳಿಂದ ಕೆಲ ಸಮುದಾಯವನ್ನು ನಾರಾಯಣಗುರುಗಳು ಕಾಪಾಡಿದರು. ಜೊತೆಗೆ ಜಾತಿ ಎಂಬ ಕೆಟ್ಟ ಸಂಪ್ರದಾಯದಿಂದ ಹೊರ ಬರಲು ಅಂತರ್ಜಾತಿ ವಿವಾಹವನ್ನು ನಾರಾಯಣಗುರುಗಳು ಪ್ರೋತ್ಸಾಹಿಸಿದರು. ಜೊತೆಗೆ ತಾನು ಸ್ಥಾಪಿಸಿದ ದೇವಾಲಯದ ಬಾಗಿಲು ಎಲ್ಲಮಾನವರಿಗಾಗಿಯೂ ತೆರೆದಿರಬೇಕು ಎಂದು ಅವರು ಇಚ್ಛೆಪಟ್ಟರು.

ಇತ್ತೀಚಿನ ಸುದ್ದಿ