ಕೋರ್ಟಲ್ಲಿ ನಡೀತು ವಿಚಿತ್ರ ಕೇಸ್ ನ ವಿಚಾರಣೆ: ಭಗವಾನ್ ಹನುಮನನ್ನೇ ಕಕ್ಷಿಯಾಗಿಸಿದ ವಿಚಿತ್ರ ಪ್ರಸಂಗ ಬಯಲು - Mahanayaka

ಕೋರ್ಟಲ್ಲಿ ನಡೀತು ವಿಚಿತ್ರ ಕೇಸ್ ನ ವಿಚಾರಣೆ: ಭಗವಾನ್ ಹನುಮನನ್ನೇ ಕಕ್ಷಿಯಾಗಿಸಿದ ವಿಚಿತ್ರ ಪ್ರಸಂಗ ಬಯಲು

08/05/2024

ದೆಹಲಿ ಹೈಕೋರ್ಟ್ ನಲ್ಲಿ ವಿಚಿತ್ರ ಪ್ರಕರಣದ ವಿಚಾರಣೆ ನಡೆದಿದೆ. ಭಗವಾನ್ ಹನುಮನನ್ನೇ ಕಕ್ಷಿಯಾಗಿಸಿದ ವಿಚಿತ್ರ ಪ್ರಸಂಗ ಇದು. ಸೂರಜ್ ಮಲಿಕ್ ಎಂಬ ವರ ಖಾಸಗಿ ಸ್ಥಳವು ಹನುಮನಿಗೆ ಸೇರಿದ್ದಾಗಿದೆ ಮತ್ತು ಹನುಮನ ಪ್ರತಿನಿಧಿಯಾಗಿ ತಾನು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದು ಈ ಸ್ಥಳವನ್ನು ತನ್ನ ವಶಕ್ಕೆ ನೀಡಬೇಕು ಎಂದು ಹೇಳಿ ಅಂಕಿತ್ ಮಿಶ್ರಾ ಎಂಬವ ಕೋರ್ಟು ಮೆಟ್ಟಿಲೇರಿದ ಪ್ರಕರಣ ಇದು.

ತಮ್ಮ ಮಗನನ್ನು ನೇಣು ಶಿಕ್ಷೆಯಿಂದ ಪಾರುಗೊಳಿಸುವುದಕ್ಕಾಗಿ ಈ ಮೊದಲು ರಕ್ತ ಪರಿಹಾರ ದೊಂದಿಗೆ ಹಲವಾರು ಬಾರಿ ಈ ತಂದೆಯನ್ನು ಅಪರಾಧಿ ಕುಟುಂಬ ಸಂಪರ್ಕಿಸಿತ್ತು. ಆದರೆ ಆ ಎಲ್ಲ ಸಂದರ್ಭಗಳಲ್ಲಿ ಈ ತಂದೆ ಕ್ಷಮೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ.
ತನ್ನ ಮಗನನ್ನು ಹತ್ಯೆ ಮಾಡಿದ ವ್ಯಕ್ತಿಯ ನೇಣು ಶಿಕ್ಷೆಯನ್ನು ಕಣ್ಣಾರೆ ನೋಡುವುದಕ್ಕಾಗಿ ಈ ಹುಮೈದ್ಅಲ್ ಅರ್ಬಿಯ ಎಂಬ ತಂದೆ ಆಗಮಿಸಿದ್ದರು. ನೇಣು ಶಿಕ್ಷೆಗೆ ರಂಗ ಸಿದ್ದಗೊಂಡಿತ್ತು. ಅಂತಿಮವಾಗಿ ಈ ತಂದೆಯಲ್ಲಿ ನೇಣು ಶಿಕ್ಷೆ ಜಾರಿಗೆ ಅನುಮತಿ ಕೋರಿದಾಗ ಅವರು ತಾನು ಕ್ಷಮಿಸಿರುವುದಾಗಿ ಘೋಷಿಸಿದರು. ಆ ಮೂಲಕ ಅಲ್ಲಿ ನೆರೆದವರನ್ನು ಮತ್ತು ಅಪರಾಧಿಯನ್ನು ತಬ್ಬಿಬ್ಬು ಗೊಳಿಸಿದರು. ಈ ಕ್ಷಮೆಗಾಗಿ ತಾನು ಯಾವ ಪರಿಹಾರ ಮೊತ್ತವನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.

ತನ್ನ ಮಗನನ್ನು ಹತ್ಯ್ಯೆ ಮಾಡಿದ ವ್ಯಕ್ತಿಗೆ ಕೊನೆ ಕ್ಷಣದಲ್ಲಿ ಕ್ಷಮೆ ನೀಡುವಂಥ ಪ್ರೇರಣೆಯನ್ನು ಅಲ್ಲಾಹನು ನನಗೆ ಒದಗಿಸಿದ ಎಂದು ಈ ತಂದೆ ಹೇಳಿದ್ದಾರೆ. ತನ್ನ ಮಗನನ್ನು ಕೊಂದವನಿಗೆ ಕೊನೆ ಕ್ಷಣದಲ್ಲಿ ಕ್ಷಮೆ ನೀಡಿ ಜೀವ ಉಳಿಸಿದ ಈ ತಂದೆಗೆ ಸೋಶಿಯಲ್ ಮೀಡಿಯಾ ಸಲ್ಯೂಟ್ ಹೇಳಿದೆ. ಅವರ ಕ್ಷಮಾ ಗುಣವನ್ನು ಕೊಂಡಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ