ಕೊರೊನಾ ಬಂದು ಐದು ವರ್ಷ ಆಯ್ತು: ಚೀನಾದಿಂದ ಮತ್ತೊಂದು ಕೊರೊನಾ ರೀತಿಯ ವೈರಸ್ ಪತ್ತೆ; ಅಲರ್ಟ್ - Mahanayaka

ಕೊರೊನಾ ಬಂದು ಐದು ವರ್ಷ ಆಯ್ತು: ಚೀನಾದಿಂದ ಮತ್ತೊಂದು ಕೊರೊನಾ ರೀತಿಯ ವೈರಸ್ ಪತ್ತೆ; ಅಲರ್ಟ್

03/01/2025

ಕೋರೋನಾ ವೈರಸ್ ಗೆ ಐದು ವರ್ಷಗಳು ತುಂಬುತ್ತಿರುವಂತೆಯೇ ಚೈನಾದಿಂದ ಇನ್ನೊಂದು ಮಾರಣಾಂತಿಕ ವೈರಸ್ ನ ಸುದ್ದಿ ಬಂದಿದೆ. ಹ್ಯೂಮನ್ ಮೆಟನ್ಯೂಮೋ ವೈರಸ್ ಅಥವಾ ಎಚ್ ಎಂ ಪಿ ವಿ ಎಂಬ ಹೆಸರಲ್ಲಿ ಈ ವೈರಸ್ ಅನ್ನು ಗುರುತಿಸಲಾಗಿದ್ದು ಚೀನಾದ್ಯಾಂತ ಅಲರ್ಟ್ ಘೋಷಿಸಲಾಗಿದೆ. ಕೊರೋನಾದ ರೂಪದಲ್ಲೇ ಈ ವೈರಸ್ ನ ಲಕ್ಷಣಗಳೂ ಗೋಚರಿಸುತ್ತಿದ್ದು ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಬಿ ತುಳುಕುತ್ತಿವೆ ಎಂದು ವರದಿಯಾಗಿದೆ.

ಇದನ್ನು ನಿಯಂತ್ರಿಸುವ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟವಾದ ನಿಲುವು ಇಲ್ಲದೆ ಇರುವುದರಿಂದ ಎಲ್ಲೆಡೆ ಗೊಂದಲ ಕಾಣಿಸಿದೆ ಎಂದು ವರದಿಯಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ನಿಮೋನಿಯಾದಂತಹ ಲಕ್ಷಣಗಳು ಹೆಚ್ಚಾಗುತ್ತಿರುವುದಾಗಿ ತಿಳಿದುಬಂದಿದೆ.

ಶ್ವಾಸಕೋಶ ತೊಂದರೆಯುಳ್ಳ ಮಕ್ಕಳ ಸ್ಯಾಂಪಲ್ ನ ಮೇಲೆ ಅಧ್ಯಯನ ನಡೆಸುತ್ತಿದ್ದ ವೇಳೆ 2001ರಲ್ಲಿ ಡಚ್ ಸಂಶೋಧಕರಿಗೆ ಈ ವೈರಸಿನ ಬಗ್ಗೆ ಮೊಟ್ಟಮೊದಲಾಗಿ ಪರಿಚಯವಾಗಿದೆ. ವೃದ್ಧರು ಮಕ್ಕಳು ಮತ್ತು ರೋಗ ಪ್ರತಿರೋಧ ಶಕ್ತಿ ಕಡಿಮೆಯಾದವರನ್ನು ಈ ವೈರಸ್ ಬಾಧಿಸುತ್ತದೆ ಎಂದು ಹೇಳಲಾಗಿದೆ. ಇದೀಗ ಚೀನಾದ ಉದ್ದಕ್ಕೂ ಹೆಚ್ ಎಂ ಪಿ ವಿ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ವರದಿಯಾಗಿದೆ. ಈ ಕಾಯಿಲೆ ಬಾದಿತರು ಟೆಸ್ಟ್ ಮಾಡಿಸುತ್ತಿಲ್ಲ ಮತ್ತು ಅವರಿಗೆ ಕಾಯಿಲೆ ಬಾಧಿಸಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಈ ವೈರಸ್ ಅನ್ನು ಎದುರಿಸುವುದಕ್ಕೆ ಸೂಕ್ತ ಔಷಧ ಇಲ್ಲದೆ ಇರುವುದು ಕೂಡ ಚೀನಾವನ್ನು ತತ್ತರ ಗೊಳಿಸಿದೆ. ಶೀತ ಕೆಮ್ಮು ಜ್ವರ ಇತ್ಯಾದಿ ಲಕ್ಷಣಗಳೊಂದಿಗೆ ದೇಹ ಪ್ರವೇಶಿಸುವ ಈ ವೈರಸ್ ರೋಗ ಪ್ರತಿರೋಧ ಶಕ್ತಿ ಕಡಿಮೆ ಇರುವವರಲ್ಲಿ ನ್ಯೂಮೋನಿಯಕ್ಕೆ ಪರಿವರ್ತನೆಯಾಗುತ್ತದೆ. ಚಳಿಯ ಸಮಯದಲ್ಲಿ ಈ ಕಾಯಿಲೆ ಹೆಚ್ಚಾಗಿ ಹರಡಲಿದೆ ಎಂದು ಹೇಳಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ