ಗಾಝಾದ ಮೇಲೆ ದಾಳಿ ನಿಲ್ಲಿಸದ ಹೊರತು ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ: ಹಮಾಸ್ ಖಡಕ್‌ ಹೇಳಿಕೆ - Mahanayaka
12:21 AM Wednesday 20 - August 2025

ಗಾಝಾದ ಮೇಲೆ ದಾಳಿ ನಿಲ್ಲಿಸದ ಹೊರತು ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ: ಹಮಾಸ್ ಖಡಕ್‌ ಹೇಳಿಕೆ

22/11/2024


Provided by

ಗಾಝಾದ ಮೇಲೆ ದಾಳಿ ನಿಲ್ಲಿಸದ ಹೊರತು ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ ಎಂದು ಹಮಾಸ್ ಹೇಳಿಕೊಂಡಿದೆ. ಅಲ್ ಅಕ್ಸ ಟೆಲಿವಿಷನ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುದ್ಧ ಕೊನೆಗೊಳ್ಳದೆ ಒತ್ತೆಯಾಳುಗಳನ್ನು ಮರಳಿಸಲು ಸಾಧ್ಯವಿಲ್ಲ, ಯುದ್ಧ ನಿಲ್ಲಿಸದಿದ್ದರೆ ಯಾವ ಕಾರಣಕ್ಕಾಗಿ ನಾವು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಎಂದು ಹಯ್ಯ ಪ್ರಶ್ನಿಸಿದ್ದಾರೆ.

ಇದೇ ವೇಳೆ ಗಾಝಾದಲ್ಲಿ ಯುದ್ಧ ಕೊನೆಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವಸಂಸೆಯಲ್ಲಿ ಮಂಡಿಸಲಾದ ಠರಾವಿಗೆ ಅಮೆರಿಕ ವಿಟೋ ಪ್ರಯೋಗಿಸಿ ತಿರಸ್ಕರಿಸುವಂತೆ ಮಾಡಿದೆ.
ಇಸ್ರೇಲ್ ದಾಳಿಗೆ ಗಾಝಾದಲ್ಲಿ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ನ ಮೇಲೆ ದಾಳಿ ಮಾಡಿದ ಹಮಾಸ್ 251 ಮಂದಿಯನ್ನು ಒತ್ತೆಯಾಳುವಾಗಿ ಗಾಝಾಕ್ಕೆ ಕೊಂಡು ಹೋಗಿತ್ತು.ಇವರಲ್ಲಿ 97 ಮಂದಿ ಈಗಲೂ ಗಾಝಾದಲ್ಲಿ ಉಳಿದಿದ್ದಾರೆ ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ