ಅವ್ರ ಮಾತಿನಿಂದ ಒಂದು ಸಮುದಾಯದ ಮತ ಬಂದಿಲ್ಲ: ಫಲಿತಾಂಶಕ್ಕೂ ಮೊದಲೇ ಜಮೀರ್ ವಿರುದ್ಧ ಸಿ.ಪಿ.ಯೋಗೇಶ್ವರ್ ಅಸಮಾಧಾನ
ಚನ್ನಪಟ್ಟಣ: ಸಚಿವ ಜಮೀರ್ ಅಹ್ಮದ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಕರಿಯಾ ಎಂದು ಕರೆದಿರುವ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರೇ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಚನ್ನಪಟ್ಟಣದಲ್ಲಿ ಸಮಬಲದ ಹೋರಾಟ ನಡೆದಿದೆ. ಆದ್ರೆ ಅವರ ಮಾತಿನಿಂದ ಕೆಲವು ಸಮುದಾಯಗಳ ಮತ ಬಂದಿಲ್ಲ ಎಂದು ಫಲಿತಾಂಶಕ್ಕೂ ಮೊದಲೇ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಜಮೀರ್ ಹೇಳಿಕೆಯಿಂದ ಒಂದೆಡೆ ಲಾಭವಾಗಿದೆ. ಇನ್ನೊಂದು ಕಡೆಯಲ್ಲಿ ಜನರ ಭಾವನೆಗೆ ಘಾಸಿಗೊಳಿಸಿದೆ. ಅವರ ಹೇಳಿಕೆಯನ್ನು ನಾನೂ ಖಂಡಿಸುತ್ತೇನೆ ಎಂದಿದ್ದಾರೆ.
ವೈಯಕ್ತಿಕವಾಗಿ ಬಳಸಿದ ಪದ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಹಾಗಾಗಿ ಅವರ ಮಾತಿನಿಂದ ಒಂದು ಸಮುದಾಯದ ಮತ ಬಂದಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: