ದೆಹಲಿಯಲ್ಲಿ ಆತಂಕ ಸೃಷ್ಟಿಸಿದ ವಾಯು ಮಾಲಿನ್ಯ: 300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಾಯು ಮಾಲಿನ್ಯದ ಹಾಟ್ ಸ್ಪಾಟ್ ಆಗಿದೆ. ಗುರುವಾರ ಕೂಡ ಮುಂಜಾನೆಯಿಂದಲೇ ದಟ್ಟ ಹೊಗೆ ಆವರಿಸಿದ್ದು, ಮುಂಜಾನೆ ಮಾಲಿನ್ಯದ ಪ್ರಮಾಣ AQI 452 ದಾಟಿದೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆಯಿಂದ ಗೋಚರತೆ ಕಡಿಮೆಯಾಗಿದ್ದು, ಪರಿಣಾಮವಾಗಿ 300ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿದೆ.
ಆನಂದ್ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್ಪುರಿ, ಮುಂಡ್ಕಾ, ನಜಾಫ್ಗಡ್, ಲಜಪತ್ ನಗರ, ಪಟ್ಟರ್ಗಂಜ್, ಪಂಜಾಬಿ ಬಾಗ್, ಆರ್.ಕೆ.ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಜೀರ್ ಪುರ ದೆಹಲಿಯ ಹಲವು ಪ್ರದೇಶಗಳಲ್ಲಿ ಭಾರೀ ವಾಯು ಮಾಲಿನ್ಯ ಕಂಡು ಬಂದಿದೆ.
ಗಾಳಿಯ ಗುಣಮಟ್ಟ ಕುಸಿತವಾಗುತ್ತಿರುವ ಹಿನ್ನೆಲೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ ಅವರು ಎಎಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಸರ್ಕಾರದ ಸಮರ್ಥತೆಯಿಂದ ಇಂಡಿಯಾಗೇಟ್ ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ದೆಹಲಿಯ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಆಗಮಿಸಿದಾಗ ಗ್ಯಾಸ್ ಚೇಂಬರ್ ಗೆ ಪ್ರವೇಶಿಸಿದಂತಹ ಅನುಭವವಾಯ್ತು ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: