ಕಾಟೇರಾ ಬಳಿಕ ಕ್ರಾಂತಿ ಸೃಷ್ಟಿಸಲು ಬರುತ್ತಿದೆ ಮತ್ತೊಂದು ಕನ್ನಡ ಸಿನಿಮಾ!: ಟ್ರೈಲರ್ ಎದೆ ಝಲ್ ಎನಿಸುವಂತಿದೆ
ಡಿಬಾಸ್ ದರ್ಶನ್ ಅಭಿನಯದ ಕಾಟೇರಾ ಚಿತ್ರದ ಬಳಿಕ ಇದೀಗ ಕನ್ನಡದಲ್ಲಿ ಮತ್ತೊಂದು ಚಿತ್ರ ಭರ್ಜರಿ ಹಿಟ್ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ. ನಿನ್ನೆಯಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಉತ್ತಮ ರೆಸ್ಪಾನ್ಸ್ ದೊರೆತಿದೆ.
‘ಧೀರ ಭಗತ್ ರಾಯ್’(DHEERA BHAGTH ROY) ಇದೀಗ ಬಿಡುಗಡೆಗೆ ಸಜ್ಜಾಗಿರುವ ಚಿತ್ರವಾಗಿದೆ. ಈ ಚಿತ್ರದ ಟ್ರೈಲರ್ ನ್ನು ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಸಲಗ ದುನಿಯವಿಜಯ್ ಬಿಡುಗಡೆ ಮಾಡಿದರು.
ಕರ್ಣನ್ ಎಸ್. ಅವರು ನಿರ್ದೇಶನ ಮಾಡಿದ್ದು, ನಾಯಕ ನಟರಾಗಿ ರಾಕೇಶ್ ದಳವಾಯಿ ಹೊಸ ಭರವಸೆಯ ನಾಯಕರಾಗಿ ಎದ್ದು ಬಂದಿದ್ದಾರೆ. ನಟನೆಯಲ್ಲಿ ಅವರ ಪ್ರಬುದ್ಧತೆ ಅಚ್ಚರಿ ಸೃಷ್ಟಿಸುವಂತಿದ್ದು, ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಸ್ಟಾರ್ ನಟನ ಉದಯವಾಗಿದೆ.
ಇದು ಹೊಸಬರ ಚಿತ್ರವಾದರೂ ಅತ್ಯಂತ ಪ್ರಬುದ್ಧವಾಗಿ ಚಿತ್ರವನ್ನು ಹೊರ ತಂದಿದ್ದಾರೆ. ಹಿರಿಯ ಹೆಸರಾಂತ ನಟರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ವೈಟ್ ಲೋಟಸ್ ಎಂಟರ್ ಟೈನ್ ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟರ್ ಟೈನರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪಾತ್ರವರ್ಗ: ರಾಕೇಶ್ ದಳವಾಯಿ, ಶರತ್ ಲೋಹಿತಾಶ್ವ, ಸುಚರಿತ ಸಹಾಯರಾಜ್, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಎಚ್.ಸಿ., ಹರಿರಾಮ್ ಎ, ಸುಧೀರ್ ಕುಮಾರ್ ಮುರೊಳ್ಳಿ, ಎಂಕೆ ಮಾತಾ, ನಯನಾ, ಸಿದ್ದಾರ್ಥ್ ಮತ್ತು ಇತರರು.
ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕರ್ಣನ್ ಎಸ್. ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಎಸ್.ವಿ, ಸಂಗೀತ ನೀಡಿದ್ದಾರೆ.
ಟ್ರೈಲರ್ ನೋಡಿ:
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: