ಒಮಾನ್ ನ ಸಾಂಪ್ರದಾಯಿಕ ಕ್ರೀಡೆ ಬುಲ್ ಫೈಟ್ ನಿಷೇಧ - Mahanayaka

ಒಮಾನ್ ನ ಸಾಂಪ್ರದಾಯಿಕ ಕ್ರೀಡೆ ಬುಲ್ ಫೈಟ್ ನಿಷೇಧ

10/11/2020

ಮಸ್ಕತ್: ಒಮಾನ್ ನ ಸಾಂಪ್ರದಾಯಿಕ ಕ್ರೀಡೆ ಬುಲ್ ಫೈಟ್ ನ್ನು  ನಿಷೇಧಿಸಲಾಗಿದ್ದು, ಮನರಂಜನೆಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಅಲ್ಲಿನ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.


Provided by

ಕಲೆ ಅಥವಾ ಮನರಂಜನಾ ಪ್ರದರ್ಶನಗಳಿಗಾಗಿ ಪ್ರಾಣಿಗಳ ಮೇಲೆ ಕ್ರೌರ್ಯ ಸರಿಯಲ್ಲ, ಒಂದು ವೇಳೆ ಇಂತಹ ಕ್ರೌರ್ಯಗಳು ನಡೆದರೆ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಮತ್ತು ದಂಡ ವಿಧಿಸಲಾಗುವುದು ಸಚಿವರಾದ ಡಾ. ಸೌದ್ ಬಿನ್ಹಾ, ಮೂಡ್ ಬಿನ್ ಅಹ್ಮದ್ ಅಲ್-ಹಬ್ಸಿ ತಿಳಿಸಿದ್ದಾರೆ.

ಪ್ರಾಣಿಗಳನ್ನು ತಪ್ಪಾಗಿ ಬಳಸುವುದು, ಅಪಾಯಕಾರಿ ವಸ್ತುಗಳನ್ನು ಚುಚ್ಚುವುದು, ಪ್ರಾಣಿಗಳನ್ನು ಮನರಂಜನೆಗಾಗಿ ಪ್ರದರ್ಶಿಸುವುದು ಮೊದಲಾದವುಗಳು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ