ಹೆಸರು ಬೇಳೆ, ಐಸ್‌ ಕ್ರೀಂ ತಿಂದ ಒಂದೇ ಕುಟುಂಬದ ನಾಲ್ವರು ಅಸ್ವಸ್ಥ! - Mahanayaka
4:55 AM Saturday 14 - December 2024

ಹೆಸರು ಬೇಳೆ, ಐಸ್‌ ಕ್ರೀಂ ತಿಂದ ಒಂದೇ ಕುಟುಂಬದ ನಾಲ್ವರು ಅಸ್ವಸ್ಥ!

hospitalized
27/10/2022

ಒಂದೇ ಕುಟುಂಬದ ನಾಲ್ಕು ಮಂದಿ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿರುವ ಘಟನೆ ಮಂಗಳೂರು ನಗರದ ಜೆಪ್ಪು ಬಪ್ಪಾಲ್‌ನಲ್ಲಿ ನಡೆದಿದೆ.

ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪು ಬಪ್ಪಾಲ್‌ ನ ನಿವಾಸಿಗಳಾದ ಅರವಿಂದರಾವ್ (52),  ಪ್ರಭಾವತಿ (45), ಸೌರಭ್ (20) ಹಾಗೂ ಪ್ರತೀಕ್ (18) ಎಂಬವರು ರಾತ್ರಿ ಹೆಸರು ಬೇಳೆ ಹಾಗೂ ಐಸ್‌ ಕ್ರೀಂ ತಿಂದು ಮಲಗಿದ್ದರು ಎನ್ನಲಾಗಿದೆ.  ಬೆಳಗ್ಗೆ ಬಾಗಿಲು ತೆಗೆಯದ ಕಾರಣ ಸಂಬಂಧಿಕರಾದ ಕೌಶಿಕ್, ಮಂಜುನಾಥ್, ರೇಣುಕಾ ಎಂಬವರು ಬಾಗಿಲು ತೆಗೆಸಿದ್ದರು. ವಾಂತಿ ಮಾಡಿಕೊಂಡಿದ್ದ ನಾಲ್ಕು ಮಂದಿಯನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ಕು ಮಂದಿಯೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿರುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಹೆಸರು ಬೇಳೆ ಮತ್ತು ಐಸ್‌ ಕ್ರೀಂ ತಿಂದ ಬಳಿಕ ಅಸ್ವಸ್ಥಗೊಂಡಿದ್ದೇವೆ. ನಾವು ಯಾವುದೇ ವಿಷಪದಾರ್ಥ ಸೇವಿಸಿಲ್ಲ ಎಂದು ನಾಲ್ಕು ಮಂದಿ ಹೇಳಿದ್ದಾರೆ.

ವೈದ್ಯರ ಪ್ರಾಥಮಿಕ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ಪಾಂಡೇಶ್ವರ ಪೊಲೀಸರು ಆಸ್ಪತ್ರೆಯಲ್ಲೇ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು  ಮಂಗಳೂರು ನಗರದ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ