ಬಿಹಾರದ ಅರಾರಿಯಲ್ಲಿ ಹಿಂದೂಗಳಿಗೆ ಮಾತ್ರ ವಾಸಿಸಲು ಅವಕಾಶ: ಬಿಜೆಪಿ ಸಂಸದ ಪ್ರದೀಪ್ ಕುಮಾರ್ ವಿವಾದಾತ್ಮಕ ಹೇಳಿಕೆ
ಬಿಹಾರದ ಅರಾರಿಯಲ್ಲಿ ಹಿಂದುಗಳಿಗೆ ಮಾತ್ರ ವಾಸಿಸಲು ಅವಕಾಶ ಇದೆ ಎಂದು ಕ್ಷೇತ್ರದ ಬಿಜೆಪಿ ಸಂಸದ ಪ್ರದೀಪ್ ಕುಮಾರ್ ಹೇಳಿದ್ದಾರೆ. ಕೇಂದ್ರ ಟೆಕ್ಸ್ ಟೈಲ್ಸ್ ಸಚಿವ ಮತ್ತು ಬೆಗುಸರಾಯಿ ಕ್ಷೇತ್ರದ ಸಂಸದರಾಗಿರುವ ಗಿರಿರಾಜ್ ಸಿಂಗ್ ಅವರ ಐದು ದಿನಗಳ ಹಿಂದೂ ಸ್ವಾಭಿಮಾನ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಹಾರದ ಆರಾರಿಯ ಕ್ಷೇತ್ರದಿಂದ ಎರಡು ಬಾರಿ ಈ ಪ್ರದೀಪ್ ಕುಮಾರ್ ಸಂಸದರಾಗಿ ಆಯ್ಕೆಯಾಗಿದ್ದಾರೆ.ನಾನೋರ್ವ ಹಿಂದೂ ಎಂದು ಹೇಳುವುದರಲ್ಲಿ ಯಾಕೆ ನಾಚಿಕೆ ಪಡಬೇಕು? ಓರ್ವ ವ್ಯಕ್ತಿ ಅರಾರಿಯದಲ್ಲಿ ಜೀವಿಸಬೇಕೆಂದರೆ ಆತ ಹಿಂದೂ ಆಗಿ ಮಾರ್ಪಡಬೇಕು ಎಂದು ಅವರು ಹೇಳಿದ್ದಾರೆ. ಅರಾರಿಯ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ 40 ಶೇಕಡ ಮುಸ್ಲಿಮರಿದ್ದಾರೆ.
ಇದೇ ವೇಳೆ ಬಿಜೆಪಿ ಸಂಸದನ ಈ ಹೇಳಿಕೆಗೆ ಮಿತ್ರ ಪಕ್ಷವಾದ ನಿತೀಶ್ ಕುಮಾರ್ ಅವರ ಜೆಡಿಯು ನಿಂದಲೇ ವಿರೋಧ ವ್ಯಕ್ತವಾಗಿದೆ. ಪ್ರದೀಪ್ ಕುಮಾರ್ ಅವರ ಹೇಳಿಕೆಯನ್ನು ಜೆಡಿಯು ರಾಜ್ಯ ವಕ್ತಾರ ನೀರಜ್ ಕುಮಾರ್ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth