ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ: ಒಡಿಸ್ಸಾ ಸರಕಾರ ತೀರ್ಮಾನ

ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯನ್ನು ನೀಡಲು ಒಡಿಸ್ಸಾ ಸರಕಾರ ತೀರ್ಮಾನಿಸುವ ಮೂಲಕ ಮಹಿಳಾಪರ ನಿಲುವನ್ನ ಕೈಗೊಂಡಿದೆ. ಇದರಿಂದಾಗಿ ವಾರ್ಷಿಕ 15 ರಜೆಗಳಲ್ಲದೆ ಮಹಿಳೆಯರಿಗೆ ಹೆಚ್ಚುವರಿ 12 ರಜೆಗಳು ಸಿಗಲಿವೆ.
ಇದು ವೇತನ ಸಹಿತ ರಜೆಯಾಗಿರಲಿದೆ. ಮಹಿಳೆಯರು ಎದುರಿಸುವ ವಿವಿಧ ಸಮಸ್ಯೆಗಳು ಮತ್ತು ಕೌಟುಂಬಿಕವಾಗಿರುವ ಜವಾಬ್ದಾರಿಗಳನ್ನು ಪರಿಗಣಿಸಿ ಈ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಮೊದಲು ಬಿಜೆಡಿ ಸರ್ಕಾರವು ಮಹಿಳೆಯರಿಗೆ 10 ಹೆಚ್ಚುವರಿ ರಜೆಯನ್ನು ಘೋಷಿಸಿತ್ತು. ಇದೀಗ ಬಿಜೆಪಿ ಸರ್ಕಾರವುಅದಕ್ಕೆ ಹೆಚ್ಚುವರಿ ಎರಡು ರಜೆಯನ್ನು ಸೇರಿಸಿದೆ.
ಮುಟ್ಟು ಮಹಿಳೆಯರ ಪಾಲಿಗೆ ಸವಾಲಿನದ್ದು ಮಾತ್ರ ಅಲ್ಲ ಮಾನಸಿಕವಾಗಿಯೂ ದೈಹಿಕವಾಗಿಯೂ ಹಲವು ಏರುಪೇರುಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕಚೇರಿ ಕೆಲಸ ದೊಂದಿಗೆ ಮನೆ ಕೆಲಸವೂ ಮಾಡುವುದು ದುಸ್ತರವಾಗಬಲ್ಲದು. ಹೆಚ್ಚಿನ ಮಹಿಳೆಯರು ಕಚೇರಿ ಕೆಲಸದ ಜೊತೆಗೆ ಮನೆ ಕೆಲಸವನ್ನೂ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಈ ರಜಾ ಘೋಷಣೆಯು ಮಹಿಳೆಯರ ಪಾಲಿಗೆ ತುಂಬಾ ಉಪಕಾರಿಯಾಗಲಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth