10 ಲಕ್ಷ ಆಪರೇಷನ್ ಕಮಲದ ಹಣವನ್ನು ಪ್ರದರ್ಶಿಸಿ ಪ್ರೆಸ್ ಮೀಟ್ ಮಾಡಿದ ಹೆಚ್.ಡಿ.ರೇವಣ್ಣ - Mahanayaka

10 ಲಕ್ಷ ಆಪರೇಷನ್ ಕಮಲದ ಹಣವನ್ನು ಪ್ರದರ್ಶಿಸಿ ಪ್ರೆಸ್ ಮೀಟ್ ಮಾಡಿದ ಹೆಚ್.ಡಿ.ರೇವಣ್ಣ

operation kamala
25/06/2021


Provided by

ಹಾಸನ: ಅರಸೀಕೆರೆ ನಗರಸಭೆ ಜೆಡಿಎಸ್ ಸದಸ್ಯರಿಗೆ ರಾತ್ರೋ ರಾತ್ರಿ 10 ಲಕ್ಷ ರೂಪಾಯಿ ಹಂಚಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಆರೋಪಿಸಲಾಗಿದೆ.


Provided by

ಅರಸೀಕರೆ ಪುರಸಭೆಯಲ್ಲಿ ಮೆಜಾರಿಟಿ ಪಡೆದುಕೊಳ್ಳಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಆಮಿಷ ಒಡ್ಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಬೆಂಬಲಿಗರು ಜೆಡಿಎಸ್ ಸದಸ್ಯರ ಮನೆಯ ಮುಂದೆ 10 ಲಕ್ಷ ರೂಪಾಯಿ ಇಟ್ಟು ಹೋಗಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

ಎರಡನೇ ವಾರ್ಡ್ ನ ನಗರಸಭೆ ಸದಸ್ಯೆ ಕಲೈರಸಿಗೆ 10 ಲಕ್ಷ ಹಣವನ್ನು ನೀಡಿದ್ದಾರೆ. ಈಗ 10 ಲಕ್ಷ ನೀಡುತ್ತೇವೆ. ನೀವು ನಮ್ಮ ಪಕ್ಷಕ್ಕೆ ಬಂದ ಬಳಿಕ 15 ನೀಡುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ ಎಂದು ರೇವಣ್ಣ ಆರೋಪಿಸಿದರು.


Provided by

“ಹಣ ಪಡೆದು ಬಿಜೆಪಿ ಸೇರಿಕೊಳ್ಳಿ ಎಂದು ಅವರು ಹೇಳಿದರು. ನಾವು ಬೇಡ ಎಂದರೂ ಹಣವನ್ನು ಇಲ್ಲಿಯೇ ಬಿಟ್ಟು ಹೋಗಿದ್ದು, ಈಗ ಇದನ್ನು ತೆಗೆದುಕೊಳ್ಳಿ ಪಕ್ಷಕ್ಕೆ ಸೇರ್ಪಡೆಯಾದಾಗ ಇನ್ನಷ್ಟು ನೀಡುತ್ತೇವೆ ಎಂದು ಅವರು ಹೇಳಿದರು ಎಂದು ಜೆಡಿಎಸ್ ನ ಪುರಸಭೆ ಸದಸ್ಯರೊಬ್ಬರು ಹೇಳಿದರು.

ಇತ್ತೀಚಿನ ಸುದ್ದಿ