ಮುಸುಕಿನ ಗುದ್ದಾಟದ ಬಳಿಕ ಕೇಂದ್ರ  ಕಾನೂನು ಸಚಿವರ ಟ್ವಿಟ್ಟರ್ ಖಾತೆಯನ್ನೇ ಬ್ಲಾಕ್ ಮಾಡಿದ ಟ್ವಿಟ್ಟರ್! - Mahanayaka

ಮುಸುಕಿನ ಗುದ್ದಾಟದ ಬಳಿಕ ಕೇಂದ್ರ  ಕಾನೂನು ಸಚಿವರ ಟ್ವಿಟ್ಟರ್ ಖಾತೆಯನ್ನೇ ಬ್ಲಾಕ್ ಮಾಡಿದ ಟ್ವಿಟ್ಟರ್!

ravi shankar prasad
25/06/2021


Provided by

ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಅಕೌಂಟ್ ನ್ನು  ಲಾಕ್ ಮಾಡಿರುವ ಟ್ವಿಟ್ಟರ್ ಒಂದು ಗಂಟೆಗಳ ಬಳಿಕ ಅನ್ ಲಾಕ್ ಮಾಡಿದ್ದು, ಇದರ ವಿರುದ್ಧ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ರವಿಶಂಕರ್ ಪ್ರಸಾದ್ ಅವರು ಯುಎಸ್ ನ ಡಿಜಿಟಲ್ ಮಿಲ್ಲೇನಿಯಮ್ ಕಾಪಿರೈಟ್ ಆಕ್ಟ್ ನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದ ಟ್ವಿಟ್ಟರ್ ರವಿಶಂಕರ್ ಅವರ ಟ್ವಿಟ್ಟರ್ ಖಾತೆಯನ್ನು ಅವರೇ ಬಳಸಲಾಗದಂತೆ ನಿರ್ಬಂಧಿಸಿತ್ತು. ಒಂದು ಗಂಟೆಯ ಬಳಿಕ ಅನ್ ಲಾಕ್ ಮಾಡಿತ್ತು.

ಇನ್ನೂ ನಿಮ್ಮ ಅಕೌಂಟ್ ಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಇನ್ನೊಂದು ನೋಟಿಸ್ ಬಂದರೂ ನಿಮ್ಮ ಅಕೌಂಟ್ ಬ್ಲಾಕ್ ಅಥವಾ ರದ್ದಾಗುವುದಕ್ಕೆ ಕಾರಣವಾಗಬಹುದು. ನಮ್ಮ ಕಾಪಿರೈಟ್ ನಿಯಮಗಳನ್ನು ಮೀರುವ ಯಾವುದೇ ಪೋಸ್ಟ್ ಗಳನ್ನು ಮಾಡಬೇಡಿ. ನಿಮಗೆ ಸಂಬಂಧಿಸದ ಮೆಟಿರಿಯಲ್ ಪೋಸ್ಟ್ ಮಾಡಿದ್ದರೆ, ತಕ್ಷಣ ತೆಗೆದು ಹಾಕಿ ಎಂದು ಟ್ವಿಟ್ಟರ್ ಎಚ್ಚರಿಕೆ ನೀಡಿದೆ.


Provided by

ಇನ್ನೂ ಈ ಬಗ್ಗೆ ಟ್ವಿಟ್ಟರ್ ನಲ್ಲಿಯೇ ಆಕ್ರೋಶ ವ್ಯಕ್ತಪಡಿಸಿರುವ ರವಿಶಂಕರ್, ಯಾವುದೇ ನೋಟಿಸ್ ನೀಡದೆ ನನ್ನ ಖಾತೆಗಳನ್ನು ನಿರ್ವಹಿಸಲು ನನಗೆ ನಿರ್ಬಂಧವನ್ನು ಹೇರಿರುವ ಟ್ವಿಟ್ಟರ್ ಭಾರತೀಯ ನೂತನ ಐಟಿ ಕಾನೂನನ್ನು ಉಲ್ಲಂಘಿಸಿದೆ ಎಂದು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿ