ಓವರ್ ಟೇಕ್ ಅಪಘಾತ: ಹೆಚ್ಚಿನ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್ - Mahanayaka
2:58 AM Thursday 14 - November 2024

ಓವರ್ ಟೇಕ್ ಅಪಘಾತ: ಹೆಚ್ಚಿನ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್

17/08/2024

ಓವರ್‌ ಟೇಕ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ‌ ಮೃತಪಟ್ಟ ಪ್ರಕರಣದಲ್ಲಿ ಹೆಚ್ಚಿನ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂಬ ಸಂದೇಶವನ್ನು ವಿಮಾ ಕಂಪೆನಿಗಳಿಗೆ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಭಾರತದ ರಸ್ತೆಗಳಲ್ಲಿ ಓವರ್ ಟೇಕಿಂಗ್ ದೈನಂದಿನ ಘಟನೆಯಾಗಿದೆ ಮತ್ತು ಅದು ಯಾವಾಗಲೂ ದುಡುಕಿನ ಚಾಲನೆಯೇ ಆಗಿರಬೇಕಿಲ್ಲ ಎಂದು ಹೇಳಿದೆ.

30 ವರ್ಷಗಳ ಹಿಂದೆ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿರುವ ಸರ್ವೋಚ್ಚ ನ್ಯಾಯಾಲಯವು, ಮೋಟರ್ ಅಪಘಾತಗಳ ನ್ಯಾಯಮಂಡಳಿಯು ಪ್ರಕಟಿಸಿದ್ದ 1.01 ಲಕ್ಷ ರೂ.ಗಳ ಪರಿಹಾರವನ್ನು 11.25 ಲಕ್ಷ ರೂ.ಗಳಿಗೆ ಏರಿಸಿದೆ.

ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಪ್ರೇಮಲಾಲ ಆನಂದ ಮತ್ತು ಅವರ ಪತ್ನಿ ಸ್ನೇಹಿತನನ್ನು ಭೇಟಿಯಾಗಲು ದ್ವಿಚಕ್ರ ವಾಹನದಲ್ಲಿ ನೊಯ್ಡಾಕ್ಕೆ ಪ್ರಯಾಣಿಸುತ್ತಿದ್ದಾಗ ಮೆಹರೌಲಿ ಬಳಿ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿತ್ತು. ಪತ್ನಿ ಮೃತಪಟ್ಟಿದ್ದರೆ ಆನಂದ ಗಂಭೀರವಾಗಿ ಗಾಯಗೊಂಡಿದ್ದರು.

ವ್ಯಕ್ತಿಯೋರ್ವ ತನ್ನ ಮುಂದಿದ್ದ ವಾಹನವೊಂದನ್ನು ಹಿಂದಿಕ್ಕಲು ಪ್ರಯತ್ನಿಸಿದ್ದ ಎಂಬ ಮಾತ್ರಕ್ಕೆ ಅದನ್ನು ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ ಎಂದು ಹೇಳುವಂತಿಲ್ಲ. ಅಲ್ಲದೆ ಅವರು ತನ್ನ ಕುಟುಂಬ ಸದಸ್ಯೆಯನ್ನು ಕಳೆದುಕೊಂಡಿದ್ದಾರೆ. ಓವರ್‌ಟೇಕಿಂಗ್ ರಸ್ತೆಗಳಲ್ಲಿ ನಡೆಯುವ ದೈನಂದಿನ ಘಟನೆಯಾಗಿದೆ ಮತ್ತು ಆನಂದ ಕೂಡ ಇದನ್ನೇ ಮಾಡಿದ್ದರು ಮತ್ತು ಸ್ವತಃ ಗಾಯಗೊಂಡಿದ್ದರು ಎಂದು ನ್ಯಾಯಾಲಯ ಮನವರಿಕೆ ಮಾಡಿದೆ.





ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ