ಪಕ್ಷ ಸ್ಥಾಪನೆಯಿಂದ ಹಿಂದಕ್ಕೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ - Mahanayaka
9:29 AM Wednesday 20 - August 2025

ಪಕ್ಷ ಸ್ಥಾಪನೆಯಿಂದ ಹಿಂದಕ್ಕೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್

29/12/2020


Provided by

ಚೆನ್ನೈ: ಹೊಸ ಪಕ್ಷ  ಆರಂಭಕ್ಕೆ ಸಿದ್ಧರಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಇದೀಗ ಪಕ್ಷ ಸ್ಥಾಪನೆಯಿಂದ ಹಿಂದಕ್ಕೆ ಸರಿದಿದ್ದು, ಈ ಬಗ್ಗೆ ಸದ್ಯಕ್ಕೆ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆರೋಗ್ಯದಲ್ಲಿ  ಏರುಪೇರು ಆದ ಬಳಿಕ ರಜನಿಕಾಂತ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ನನಗೆ ಆರೋಗ್ಯದ ಕಡೆಗೆ ಗಮನ ಹರಿಸಲೇ ಬೇಕಾಗಿದೆ. ಪಕ್ಷವನ್ನು ಅಧಿಕೃತವಾಗಿ ಹೊರ ತಂದರೂ ಮನೆಮನೆಗಳಿಗೆ ಹೋಗಿ ಪ್ರಚಾರ ಮಾಡಲು ಸದ್ಯ ಸಾಧ್ಯವಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.

ಕೇವಲ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ಯಾವುದೇ ಪಕ್ಷ ಗೆಲುವು ಸಾಧಿಸಲು ಸಾಧ್ಯವಿಲ್ಲ. ಇದು ವಾಸ್ತವವಾಗಿದೆ. ನಾನು ಚುನಾವಣೆಗೆ ಇಳಿಯದೆಯೂ ಜನರ ಸೇವೆ ಮಾಡಬಲ್ಲೆ. ಸತ್ಯವನ್ನು ಮಾತನಾಡಲು ಎಂದಿಗೂ ಭಯವಿಲ್ಲ. ಸತ್ಯ ಮತ್ತು ಪಾರದರ್ಶಕತೆಯನ್ನು ಪ್ರೀತಿಸುವ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಎಲ್ಲ ಅಭಿಮಾನಿಗಳಲ್ಲೂ ಈ ನಿರ್ಧಾರವನ್ನು ಸ್ವೀಕರಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ