ಇಸ್ರೇಲ್ ನಿಂದ ಬಿಡುಗಡೆಗೊಂಡ ಫೆಲೆಸ್ತೀನಿಯರು: ರಮಲ್ಲಾಗೆ ಆಗಮನ

ಇಸ್ರೇಲ್ ಬಿಡುಗಡೆ ಮಾಡಿದ ಫೆಲೆಸ್ತೀನ್ ಕೈದಿಗಳನ್ನು ಹೊತ್ತ ಎರಡು ಬಸ್ಸುಗಳು ಪಶ್ಚಿಮ ದಂಡೆಯ ರಮಲ್ಲಾಗೆ ಬಂದಿಳಿದಿವೆ ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಗುರುವಾರ ಅವರನ್ನು ಸ್ವಾಗತಿಸಲು ದೊಡ್ಡ ಜನಸಮೂಹ ಜಮಾಯಿಸಿತು. ಘೋಷಣೆಗಳನ್ನು ಕೂಗಲಾಯಿತು ಮತ್ತು ಧ್ವಜಗಳನ್ನು ಬೀಸಲಾಯಿತು.
ಬಿಡುಗಡೆಗೊಂಡ ಕೈದಿಗಳ ಕುಟುಂಬಗಳು ಸ್ವಾಗತ ಪ್ರದೇಶದ ಹೊರಗೆ ಕಾತುರದಿಂದ ಕಾಯುತ್ತಿದ್ದವು. ಅಂತಿಮವಾಗಿ ತಮ್ಮ ಪ್ರೀತಿಪಾತ್ರರೊಂದಿಗೆ ಮತ್ತೆ ಸೇರಿದಾಗ ಅನೇಕರು ಕಣ್ಣೀರು ಹಾಕಿದರು.
ಇದು ಸಂತೋಷ ಮತ್ತು ನೋವಿನ ಕ್ಷಣ ಎಂದು ಕೈದಿಯ ಸಂಬಂಧಿ ಸಮಹ್ ಅಬೆದ್ ಬಿಡುಗಡೆಯ ಬಗ್ಗೆ ಪ್ರತಿಕ್ರೊಯೆ ವ್ಯಕ್ತಪಡಿಸಿದರು. ಆದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ನಿರಂತರ ಸಂಘರ್ಷದ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.
ಜನವರಿ 19 ರಿಂದ ಜಾರಿಗೆ ಬಂದ ಗಾಝಾ ಕದನ ವಿರಾಮ ಮತ್ತು ಹಮಾಸ್ ನೊಂದಿಗೆ ಕೈದಿ-ಒತ್ತೆಯಾಳುಗಳ ವಿನಿಮಯ ಒಪ್ಪಂದದ ಭಾಗವಾಗಿ ಇಸ್ರೇಲ್ ಗುರುವಾರ 110 ಫೆಲೆಸ್ತೀನ್ ಕೈದಿಗಳ ಬಿಡುಗಡೆಯನ್ನು ಪೂರ್ಣಗೊಳಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಇಸ್ರೇಲಿ ಭದ್ರತಾ ಅಧಿಕಾರಿಯೊಬ್ಬರು ಕ್ಸಿನ್ಹುವಾದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj