ಪತ್ರಕರ್ತರಿಗೆ ಲಂಚ: ಕಾಂಗ್ರೆಸ್ ನ ಟೂಲ್ ಕಿಟ್ ನ ಪರಿಣಾಮ ಸುಳ್ಳು ಸೃಷ್ಟಿ: ಸಿಎಂ ಬೊಮ್ಮಾಯಿ
ಬೆಂಗಳೂರು: ಪತ್ರಕರ್ತರಿಗೆ ಲಂಚ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಕಾಂಗ್ರೆಸ್ ಟೂಲ್ ಕಿಟ್ ನ ಪರಿಣಾಮ, ಸುಳ್ಳನ್ನು ಸೃಷ್ಟಿ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹತ್ತು ಹಲವರು ಪತ್ರಕರ್ತರಿಗೆ ಏನೇನು ಗಿಫ್ಟ್ ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ, ಮಾಧ್ಯಮಗಳಲ್ಲಿ ಕೂಡ ಅದು ಸುದ್ದಿಯಾಗಿತ್ತು. ಅದು ಐಫೋನ್, ಲ್ಯಾಪ್ ಟಾಪ್, ಬಂಗಾರದ ನಾಣ್ಯ ಇತ್ಯಾದಿಗಳನ್ನೇ ಕೊಟ್ಟಿದ್ದರು.ಇವರಿಗೆ ಯಾವ ನೈತಿಕ ಹಕ್ಕು ಮಾತನಾಡಲು ಇದೆ ಎಂದು ವಾಗ್ದಾಳಿ ನಡೆಸಿದರು.
ಗಿಫ್ಟ್ ಕೊಟ್ಟ ವಿಚಾರದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ತನಿಖೆ ಮಾಡಲಿ, ಪತ್ರಕರ್ತರಿಗೆ ಉಡುಗೊರೆ ಕೊಟ್ಟಿದ್ದಾರೆ, ತೆಗೆದುಕೊಂಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ, ನಿನ್ನೆ ಕಾಂಗ್ರೆಸ್ ನ ವಕ್ತಾರರು ಅದನ್ನು ಬಹಳ ಕೆಟ್ಟದಾಗಿ ವ್ಯಾಖ್ಯಾನಿಸಿದ್ದು ಅದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಪತ್ರಕರ್ತರಿಗೆ ಗಿಫ್ಟ್ ಕೊಡಬೇಕೆಂದು ನಾನು ಯಾರಿಗೂ ಸೂಚನೆ ನೀಡಿರಲಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು ಅವರು ತನಿಖೆ ನಡೆಸುತ್ತಾರೆ ಸತ್ಯ ಹೊರ ಬರುತ್ತದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka