ಪವನ್ ಕಲ್ಯಾಣ್ ಕಿರಿಯ ಪುತ್ರನ ಸ್ಥಿತಿ ಗಂಭೀರ: ಶಾಲೆಯಲ್ಲಿ ಬೆಂಕಿ ಅವಘಡದಿಂದ ಗಂಭೀರ ಗಾಯ

08/04/2025
ಸಿಂಗಾಪುರ: ಶಾಲೆಯಲ್ಲಿ ನಡೆದ ಅಗ್ನಿಅವಘಡದಲ್ಲಿ ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಕಿ ಅವಘಡದಲ್ಲಿ ಮಾರ್ಕ್ ನ ಕೈ ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಶ್ವಾಸಕೋಶಕ್ಕೆ ಹೊಗೆ ನುಗ್ಗಿದ ಪರಿಣಾಮ ತೀವ್ರ ರೀತಿಯ ತೊಂದರೆ ಅನುಭವಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಪತಿಯ ಪುತ್ರ ಮಾರ್ಕ್ ಶಂಕರ್ 2017ರಲ್ಲಿ ಜನಿಸಿದ್ದರು. ಸದ್ಯ ಪತ್ನಿ ಅನ್ನಾ ಸಿಂಗಪುರದಲ್ಲೇ ವಾಸವಿದ್ದಾರೆ. ಮಾರ್ಕ್ ಶಂಕರ್ ಕೂಡ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: