ಜೀವನದಲ್ಲಿ ಕೆಟ್ಟ ಕೆಲಸ ಮಾಡಿಲ್ಲ ಎಂದು ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ಅಪಘಾತದಲ್ಲಿ ಮೂವರನ್ನು ಬಲಿಪಡೆದ!

ಜೈಪುರ: ನಾನು ನನ್ನ ಜೀವನದಲ್ಲಿ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ ಎಂಬ ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳ ಬಳಿ ಕಾಂಗ್ರೆಸ್ ನಾಯಕನೊಬ್ಬ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಮೂವರನ್ನು ಬಲಿ ಪಡೆದ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.
ಕಾಂಗ್ರೆಸ್ ಸದಸ್ಯ ಉಸ್ಮಾನ್ ಖಾನ್ ಎಂಬಾತ ಸೋಮವಾರ ರಾತ್ರಿ ಸುಮಾರು 9.45ರ ಸುಮಾರಿಗೆ ಜೈಪುರದ ನಹರ್‌ಗಢ ಪ್ರದೇಶದಲ್ಲಿ ಕುಡಿತದ ಮತ್ತಿನಲ್ಲಿ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣವಾಗಿದ್ದಾನೆ. ಘಟನೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಉಸ್ಮಾನ್ ಖಾನ್ ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಕುಡಿದ ಅಮಲಿನಲ್ಲಿದ್ದ ಉಸ್ಮಾನ್ ಖಾನ್ ಕಿರಿದಾದ ರಸ್ತೆಯಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಾ ಒಂದು ಬೈಕ್ ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ಆದರೂ ಕಾರು ನಿಲ್ಲಿಸದೇ ಮತ್ತೆ ಮೂರು ವಾಹನಗಳಿಗೆ ಕಾರನ್ನು ಗುದ್ದಿದ್ದಾನೆ. ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಉಸ್ಮಾನ್ ಖಾನ್ ನನ್ನು ಬಂಧಿಸಿದ್ದಾರೆ. ಮೃತಪಟ್ಟವರನ್ನು ಮಮತಾ ಕನ್ವರ್ (50), ಅವಧೇಶ್ ಪರೀಕ್ (37) ಮತ್ತು ವೀರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: